ಕೊಕ್ಕೆಚ್ಚಾಲ್ ವಾಫಿ ಕಾಲೇಜ್ ಕಟ್ಟಡ ಉದ್ಘಾಟನೆ 8ರಂದು

ಕುಂಬಳೆ: ಮಮ್ಮುಞಿ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಅಧೀನದಲ್ಲಿ ಕೊಕ್ಕೆಚ್ಚಾಲ್ ಉಮರಲಿ ಶಿಹಾಬ್ ತಂಙಳ್ ಇಸ್ಲಾ ಮಿಕ್ ಅಕಾಡೆಮಿ ವಾಫಿ ಕಾಲೇಜಿಗೆ ನೂತನವಾಗಿ ನಿರ್ಮಿಸಿ ನೀಡಿದ ಅಕಾಡೆಮಿಕ್ ಬ್ಲೋಕ್‌ನ ಉದ್ಘಾಟನೆ ಹಾಗೂ ಸನದ್‌ದಾನ ಘೋಷಣೆ ಈ ತಿಂಗಳ ೮ರಂದು ಬೆಳಿಗ್ಗೆ 10 ಗಂಟೆಗೆ ಪಾಣಕ್ಕಾಡ್ ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ನಿರ್ವಹಿಸುವರು ಎಂದು ಪದಾಧಿಕಾರಿಗಳು ಕುಂಬಳೆ ಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  2012ರಲ್ಲಿ ಆರಂಭ ಗೊಂಡ ವಾಫಿ ಕಾಲೇಜ್‌ನ ಮೊದಲ ಸನದ್ ದಾನ ಮುಂದಿನ ವರ್ಷ ನಡೆಯಲಿದೆ. ಇದೇ ವೇಳೆ ಕಾಲೇಜಿನ ವೆಬ್‌ಸೈಟ್ ಲಾಂಚಿಂಗ್‌ನನ್ನು ತಂಙಳ್ ನಿರ್ವಹಿಸು ವರು. ಕಾಲೇಜ್‌ನ ಅಧ್ಯಕ್ಷ ಅಬಿದಿನ್ ತಂಙಳ್ ಅಲ್‌ಬುಖಾರಿ ಕುನ್ನುಂಗೈ ಅಧ್ಯಕ್ಷತೆ ವಹಿಸುವರು. ಶಾಸಕ ಎ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಯಾಗಿರುವರು. ಹಲವರು ಭಾಗವಹಿಸುವರು. ಈ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಎಂ.ಎಸ್. ಖಾಲಿದ್, ಟ್ರಸ್ಟಿ ಸದಸ್ಯರಾದ ಅಹಮ್ಮದ್ ಕುಂಞಿ ಹಾಜಿ, ಹೈದರ್ ವಳಪ್, ಅಧ್ಯಾಪಕ ಉನೈಸ್ ಭಾಗವಹಿಸಿ ದರು.

RELATED NEWS

You cannot copy contents of this page