ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ ಧನ್ಯಶ್ರೀ ಸರಳಿ ಪ್ರಥಮ
ಬದಿಯಡ್ಕ: ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಧನ್ಯಶ್ರೀ ಸರಳಿಯವರ ‘ಜೀವನ ಅಮೃತ ಸಮಾನ’ ಎಂಬ ಕಥೆಗೆ ಪ್ರಥಮ ಬಹುಮಾನ ಲಭಿಸಿದೆ. ಶ್ರೀ ರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲ ಮಹಿಳಾ ಘಟಕ ನೇತೃತ್ವದಲ್ಲಿ ಹವ್ಯಕ ಭಾಷೆಯಲ್ಲಿ ನಡೆಸಿದ ಕಥಾ ಸ್ಪರ್ಧೆಯಲ್ಲಿ ಒಟ್ಟು ೧೮ ಮಂದಿ ಭಾಗವಹಿಸಿದ್ದು, ಐವರ್ನಾಡು ನಿಡುಬೆಯ ಚೈತನ್ಯ ಬಿ ಇವರಿಗೆ ದ್ವಿತೀಯ, ವೇಣೂರು ಕುಂಡ್ಯಡ್ಕ ಸರಸ್ವತಿ ಆರ್.ಜಿ. ಭಟ್ರ ಕಥೆಗೆ ತೃತೀಯ ಬಹುಮಾನ ಲಭಿಸಿದೆ. ಅಧ್ಯಾಪಕ ನಾರಾಯಣ ಹೆಗ್ಡೆ ಕುಂಬಳೆ, ಸಾಹಿತಿ ಹರಿಕೃಷ್ಣ ಭರಣ್ಯ, ನಿವೃತ್ತ ಅಧ್ಯಾಪಕ ಬಾಲ ಮಧುರಕಾನನ ಮೌಲ್ಯಮಾಪನ ನಡೆಸಿದ್ದರು. ಕಥಾ ಸ್ಪರ್ಧೆಗೆ ಸಾಹಿತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ನೇತೃತ್ವ ನೀಡಿದ್ದಾರೆ. ಪ್ರಥಮ ಬಹುಮಾನ ಪಡೆದ ಧನ್ಯಶ್ರೀ ಸರಳಿ ಬದಿಯಡ್ಕದ ಛಾಯಾಗ್ರಹಕ ಶ್ಯಾಮ ಪ್ರಸಾದ್ ಸರಳಿಯವರ ಪತ್ನಿಯಾಗಿದ್ದು, ಇವರ ಕವಿತೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.