ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಿಪಿಎಂಗೆ ಜಯ

ಕೊಡ್ಲಮೊಗರು: ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್‌ನ ೨೦೨೪-೨೦೨೯ನೇ ಸಾಲಿನ ಆಡಳಿತ ಮಂಡಳಿ  ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಎಲ್ಲಾ ಅಭ್ಯರ್ಥಿಗಳು ಅತ್ಯಧಿಕ ಮತಗಳನ್ನು ಗಳಿಸಿ ಜಯ ಸಾಧಿಸಿದ್ದಾರೆ.  ೧೧೦೦ಕ್ಕಿಂತಲೂ ಸದಸ್ಯರು ಮತದಾನ ದಲ್ಲಿ ಭಾಗವಹಿಸಿದ್ದರು. ಸಿಪಿಎಂನ ಮೋಹನ ಬಿ, ಇಸ್ಮಾಯಿಲ್, ಲೋ ಕೇಶ್ ಶೆಟ್ಟಿ,  ಜನಾರ್ದನ ನಾಯ್ಕ್, ಇಂದಿರಾ, ಶಶಿಕಲಾ, ಭಾಸ್ಕರ ಶೆಟ್ಟಿಗಾರ್, ವಸಂತರಾಜ್ ಸಾಮಾನಿ, ರಘುನಾಥ ರೈ ಕೆ, ಚಿತ್ರಶ್ರೀ, ಅಬ್ದುಲ್ ಖಾದರ್ ಇವರೆಲ್ಲರೂ ತಲಾ ೯೫೦ಕ್ಕಿಂತಲೂ ಅಧಿಕ ಮತಗಳನ್ನು ಗಳಿಸಿ ವಿಜಯ ಗಳಿಸಿದರೆ, ಎದುರಾಳಿಗಳಾಗಿ ಯುಡಿಎಫ್ ಪ್ಯಾನಲಿನಲ್ಲಿ ಸ್ಪರ್ಧಿಸಿದವರು ಪರಾಭವ ಹೊಂದಿದ್ದಾರೆ.

RELATED NEWS

You cannot copy contents of this page