ಕೊನೆಗೂ ವಿಸ್ಮಯಳನ್ನು ಸ್ವಂತವಾಗಿಸಿದ ಮುಹಮ್ಮದ್ ಅಶ್ಫಾಕ್

ಕಾಸರಗೋಡು: ದೂರುಗಳು ಹಾಗೂ ಕೇಸುಗಳ ಕೊನೆಗೆ ವಿಸ್ಮಯಳನ್ನು ಮೊಹಮ್ಮದ್ ಅಶ್ಫಾಕ್ ಸ್ವಂತಮಾಡಿ ಕೊಂಡಿದ್ದಾನೆ. ಇಬ್ಬರು ವಿವಾಹವಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವಾರು ಪ್ರಕರಣಗಳಲ್ಲಿ ಆರೋಪಿಯಾದ ಮೊಹಮ್ಮದ್ ಅಶ್ಫಾಕ್  ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ. ಈತ ಹಾಗೂ ಮಂಗಳೂರಿನಲ್ಲಿ  ಬಿಸಿಎ ವಿದ್ಯಾರ್ಥಿನಿ ಯಾಗಿರುವ ವಿಸ್ಮಯ ಎಂಬ ಯುವತಿಯ ಜೊತೆ ಪ್ರೇಮ ಮೂಡಿತ್ತು. ಈ ಮಧ್ಯೆ ಕೆಲವು ತಿಂಗಳ ಹಿಂದೆ ವಿಸ್ಮಯ ನಾಪತ್ತೆಯಾಗಿದ್ದಳು. ಮನೆಯವರು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿ ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆಕೆಯ ಇಷ್ಟದಂತೆ ತೆರಳಲು ತಿಳಿಸಿದಾಗ ವಿಸ್ಮಯ ಹೆತ್ತವರ ಜೊತೆ ತೆರಳಿದ್ದಳು. ಆ ಬಳಿಕ ವಿಸ್ಮಯಳನ್ನು ಮನೆ ಮಂದಿ ಉಳ್ಳಾಲದ  ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಆದರೆ ಅಲ್ಲಿಂದ ಅಪಹರಿಸಿರುವುದಾಗಿ ಉಳ್ಳಾಲ ಪೊಲೀಸರಿಗೆ ದೂರು ನೀಡಲಾಗಿತ್ತು. ಮೊಹಮ್ಮದ್ ಅಶ್ಫಾಕ್ ವಿವಾಹಿತನಾಗಿದ್ದಾನೆಂದೂ ಹಲವಾರು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆಂದು ದೂರಿನಲ್ಲಿ ಹೇಳಲಾಗಿತ್ತು. ಬಳಿಕ ವಿಸ್ಮಯಳನ್ನು ಪತ್ತೆಹಚ್ಚಿ ಕೌನ್ಸೆಲಿಂಗ್ ಸೆಂಟರ್‌ಗೆ ಸೇರಿಸಲಾಗಿತ್ತು.  ಅಶ್ಫಾಕ್ ನೊಂದಿಗೆ ಜೀವಿಸಲು ಆಗ್ರಹವೆಂದು ವಿಸ್ಮಯ ನ್ಯಾಯಾಲ ಯದಲ್ಲಿ ಸ್ಪಷ್ಟಪಡಿ ಸಿದ್ದಳು. ನ್ಯಾಯಾ ಲಯ ಇದನ್ನು ಅಂಗೀಕರಿಸಿದ್ದು, ಇದರ ಮಧ್ಯೆ  ವಿವಾಹ ನಡೆದಿದೆ. ಇವರ ವಿವಾಹದ ಫೋಟೋ ಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಹರಿಯಬಿಡಲಾಗಿದೆ.

RELATED NEWS

You cannot copy contents of this page