ಕೊಯಂಬತ್ತೂರಿನಲ್ಲಿ ಅಪಘಾತ: ಮೃತಪಟ್ಟ ಕಟ್ಟತ್ತಡ್ಕ ನಿವಾಸಿ ಯುವಕನ ಮೃತದೇಹ ಊರಿಗೆ

ಕುಂಬಳೆ: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕಟ್ಟತ್ತಡ್ಕ ನಿವಾಸಿಯಾದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯ ಮೃತದೇಹವನ್ನು ಇಂದು ಬೆಳಿಗ್ಗೆ ಸ್ವ-ಗೃಹಕ್ಕೆ ತಲುಪಿಸಲಾಯಿತು.

ಕಟ್ಟತ್ತಡ್ಕ ಎ.ಕೆ.ಜಿ ನಗರದಲ್ಲಿ ವಾಸಿಸುವ  ಮೊಗ್ರಾಲ್ ಕೊಪ್ಪಳ ನಿವಾಸಿ ಅಹಮ್ಮದ್‌ರ ಪುತ್ರ  ಎಂ.ಕೆ. ಮೊಹಮ್ಮದ್ ರಾಶಿದ್ (21)ರ ಮೃತದೇಹವನ್ನು ಇಂದು ಬೆಳಿಗ್ಗೆ ಕಳತ್ತೂರು ಜುಮಾ ಮಸೀದಿಗೆ ತಲುಪಿಸಿವಿಧಿ ವಿಧಾನದ ಬಳಿಕ ಮನೆಗೆ ಕೊಂಡೊಯ್ಯಲಾಯಿತು. ಅನಂತರ ಮುಗು  ರೋಡ್‌ನ ತ್ವಾಹ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮೃತದೇಹವನ್ನು ಊರಿಗೆ ತಲುಪಿಸಿದಾಗ  ಅಂತಿಮ ನಮನ ಸಲ್ಲಿಸಲು ಸಂಬಂಧಿಕರು, ಸ್ನೇಹಿತರು ಸಹಿತ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಎಂ.ಕೆ. ಮೊಹಮ್ಮದ್ ರಾಶಿದ್ ಕೊಯಂಬತ್ತೂರಿನಲ್ಲಿ ದ್ವಿತೀಯ ವರ್ಷ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿದ್ದರು. ಮೊನ್ನೆ ರಾತ್ರಿ ರಸ್ತೆ ಬದಿ ಬೈಕ್ ನಿಲ್ಲಿಸಿ ಹೋಟೆಲ್‌ನಿಂದ ಆಹಾರ ಖರೀದಿಸಿ ರಸ್ತೆ ದಾಟುತ್ತಿದ್ದಾಗ ಆಗಮಿಸಿದ ಟಿಪ್ಪರ್ ಲಾರಿ  ಢಿಕ್ಕಿ ಹೊಡೆದು ಅವರು ಮೃತಪಟ್ಟಿದ್ದರು.

You cannot copy contents of this page