ಕೊಯಂಬತ್ತೂರಿನಲ್ಲಿ ಚಿನ್ನದ ಸರ ಎಗರಿಸಿದ ವಲಸೆ ಕಾರ್ಮಿಕ ಕಾಸರಗೋಡಿನಲ್ಲಿ ಸೆರೆ
ಕಾಸರಗೋಡು: ಕೊಯಂಬತ್ತೂರಿ ನಲ್ಲಿ 71 ವರ್ಷದ ಮಹಿಳೆಯ ಕುತ್ತಿಗೆಯಿಂದ ಎರಡೂ ಮುಕ್ಕಾಲು ಪವನ್ ಚಿನ್ನದ ಸರ ಎಗರಿಸಿ ಪರಾರಿ ಯಾದ ವಲಸೆ ಕಾರ್ಮಿಕನ್ನು ಚಟ್ಚಂ ಚಾಲ್ನಿಂದ ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಚಾರ್ಮಾಬಿ ನಿವಾಸಿ ಗೋಕುಲ್ ಕುಮಾರ್ (18) ಬಂಧಿತ ಆರೋಪಿ. ಇಂಟೀರಿಯರ್ ಕಾರ್ಮಿಕ ನಾಗಿರುವ ಆರೋಪಿಯ ತಂದೆ, ಸಹೋದರ ಸೇರಿದಂತೆ ಎಂಟು ಮಂದಿ ಚಟ್ಚಂಚಾಲ್ನಲ್ಲಿ ದುಡಿಯುತ್ತಿದ್ದಾರೆ. ಈಮಧ್ಯೆ ಆರೋಪಿ ಕೊಯಂಬತ್ತೂರಿಗೆ ಹೋಗಿ ಅಲ್ಲಿ ದುಡಿಯಲಾರಂಭಿಸಿದ. ಜುಲೈ 18ರಂದು ಅಲ್ಲಿ ಆತ 71ವರ್ಷದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಚಟ್ಚಂಚಾಲ್ಗೆ ಪರಾರಿಯಾಗಿದ್ದನು. ಮಹಿಳೆಯ ಸರ ಎಗರಿಸಿದ ದೃಶ್ಯಗಳು ಆ ಪರಿಸರದ ಸಿಸಿ ಟಿವಿ ಕ್ಯಾಮರಾದಲ್ಲಿ ಗೋಚರಿಸಿತ್ತು. ಅದರ ಹಾಗೂ ಆರೋಪಿಯ ಮೊಬೈಲ್ ಫೋನ್ನಂಬ್ರವನ್ನು ಕೇಂದ್ರೀಕರಿಸಿ ಸೈಬರ್ ಸೆಲ್ನ ಸಹಾ ಯದಿಂದ ತನಿಖೆ ನಡೆಸಿದಾಗ ಆರೋಪಿ ಚಟ್ಚಂಚಾಲ್ನಲ್ಲಿರುವ ಬಗ್ಗೆ ಮಾಹಿತಿ ಲಭಿಸಿದೆ. ಅದರಂತೆ ಕೊಯಂಬತ್ತೂರು ತೇನಿ ಕುನಿಯಮುತ್ತೂರು ಪೊಲೀಸರು ಇಲ್ಲಿಗೆ ಆಗಮಿಸಿ ಮೇಲ್ಪರಂಬ ಪೊಲೀಸರ ಸಹಾಯದಿಂದ ಆರೋಪಿ ಯನ್ನು ಬಂಧಿಸಿ ಕೊಯಂಬತ್ತೂರಿಗೆ ಸಾಗಿಸಿದ್ದಾರೆ. ಎಗರಿಸಿದ ಚಿನ್ನವನ್ನು ತಾನು ಮಾರಾಟಮಾಡಿ ಅದರ ದೊಡ್ಡ ಮೊತ್ತವನ್ನು ಆನ್ಲೈನ್ ಗೈಮ್ಸ್ನಲ್ಲಿ ಉಪಯೋಗಿಸಿ ಅದು ನಷ್ಟಗೊಂಡಿ ದೆಯೆಂದೂ ಬಾಕಿ ಹಣವನ್ನು ಊರಿಗೆ ಕಳುಹಿಸಿಕೊಟ್ಟಿರು ವುದಾಗಿ ಆರೋಪಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ.