ಕೊಲೆ ಪ್ರಕರಣ: ಯುಎಇಯಲ್ಲಿ ಕಾಸರಗೋಡು, ಕಣ್ಣೂರಿನ ಇಬ್ಬರಿಗೆ ಮರಣದಂಡನೆ ಶಿಕ್ಷೆ ಜ್ಯಾರಿ
ಕಾಸರಗೋಡು: ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಹಾಗೂ ಕಣ್ಣೂರು ನಿವಾಸಿಗಳಾದ ಗಲ್ಫ್ ರಾಷ್ಟ್ರವಾದ ಯುಎಇ ಸರಕಾರ ಮರಣದಂಡನೆ ಶಿಕ್ಷೆ ಜ್ಯಾರಿಗೊಳಿಸಿದೆ. ಕಾಸರಗೋಡು ಜಿಲ್ಲೆಯ ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ವಳಪ್ಪಿಲ್ ಮುರಳೀಧರನ್ (43) ಮತ್ತು ಕಣ್ಣೂರು ತಲಶ್ಶೇರಿ ನೆಟ್ಟೂರು ಅರಂಙಲೋಟ್ ತೆಕ್ಕೆಪರಂಬಿಲ್ ಮೊಹಮ್ಮದ್ ಅನಾಷ್ (43) ಎಂಬವರಿಗೆ ಮರಣದಂಡನೆ ಶಿಕ್ಷೆ ಜ್ಯಾರಿಗೊಳಿಸಲಾಗಿದೆ. ಮುರಳೀಧರನ್ ಕುಟುಂಬ ಕಣ್ಣೂರು ತೈಯಿಲ್ ಪೆರುಂತಟ್ಟ ವಳಪ್ಪಿಲ್‌ನಲ್ಲಿ ವಾಸಿಸುತ್ತಿದೆ. ಮುರಳೀಧರನ್ ೨೦ ವರ್ಷದಿಂದಲೇ ಯುಎಇಯಲ್ಲಿ ದುಡಿಯುತ್ತಿದ್ದರು. 2009ರಲ್ಲಿ ಮಲಪ್ಪುರಂ ತಿರೂರು ನಿವಾಸಿ ಮೊದೀನ್ ಎಂಬವರನ್ನು ಯುಎಇಯ ಆಲ್‌ಐಸಿ ಎಂಬಲ್ಲಿ ಕೊಲೆಗೈದ ಪ್ರಕರಣದಲ್ಲಿ ಮುರಳೀಧರನ್ ಆರೋಪಿಯಾಗಿದ್ದು, ಆ ಪ್ರಕರಣದಲ್ಲಿ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಫೆ. ೧೫ರಂದು ಮುರಳೀಧರನ್ ಮತ್ತು ಮೊಹಮ್ಮದ್ ರಿಯಾಶ್‌ರಿಗೆ ಮರಣದಂಡನೆ ಶಿಕ್ಷೆ ಜ್ಯಾರಿಗೊಳಿಸಲಾಗಿದೆ ಎಂದು ಯುಎಇ ಸರಕಾರ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ವಿದ್ಯುಕ್ತವಾಗಿ ತಿಳಿಸಿದೆ.
ಮರಣದಂಡನೆ ಜ್ಯಾರಿಗೊಳಿಸುವ ಒಂದು ದಿನದ ಹಿಂದೆ ಫೋನ್ ಮೂಲಕ ಮನೆಯವರನ್ನು ಸಂಪರ್ಕಿಸಲು ಯುಎಇ ಸರಕಾರ ಮುರಳೀಧರನ್‌ರಿಗೆ ಅವಕಾಶ ನೀಡಿತ್ತು. ಅದರಂತೆ ಅವರು ಫೋನ್ ಮೂಲಕ ಮನೆಯವರನ್ನು ಸಂಪರ್ಕಿಸಿ ‘ನೀವು ಇನ್ನು ನನ್ನನ್ನು ಕಾಣಲಾರಿರಿ’ ಎಂದು ತಿಳಿಸಿದ್ದರೆನ್ನ ಲಾಗಿದೆ. ಇನ್ನು ೨೦೨೩ರಲ್ಲಿ ಯುಎಇ ಅಲ್‌ಐನಿಯಲ್ಲಿ ಯುಎಇ ಪ್ರಜೆಯೋರ್ವರನ್ನು ಕೊಲೆಗೈದ ಪ್ರಕರಣದಲ್ಲಿ ಮೊಹ ಮ್ಮದ್ ಅನಾಷ್‌ರಿಗೆ ಮರಣದಂಡನೆ ಶಿಕ್ಷೆ ಜ್ಯಾರಿಗೊಳಿಸಲಾಗಿದೆ.
ವಿಷಯ ತಿಳಿದ ಅನಾಷ್‌ನ ಮನೆಯವರು ಈಗಾಗಲೇ ಯುಎಇಗೆ ತಲುಪಿದ್ದಾರೆ. ಮರಣದಂಡನೆಗೊಳಗಾದವರ ಮೃತದೇಹಗಳನ್ನು ಯುಎಇಯಲ್ಲೇ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.