ಕೊಳಕ್ಕೆ ಬಿದ್ದು ಕೃಷಿಕ ಮೃತ್ಯು
ಮುಳ್ಳೇರಿಯ: ಕುಂಟಾರು ಪಡ್ಯತ್ತಡ್ಕದಲ್ಲಿ ಕೃಷಿಕ ಕೊಳದಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತೆಕ್ಕೇಕರೆ ಮೇಲತ್ತ್ ತರವಾಡು ಸದಸ್ಯ ಪಡ್ಯತ್ತಡ್ಕದ ಮೇಲತ್ತ್ ದಾಮೋದರನ್ ನಾಯರ್ (72) ಮೃತಪಟ್ಟವರು.
ಕಂಗಿನ ತೋಟದ ಕೊಳದ ಬದಿಯನ್ನು ಶುಚಿಗೊಳಿಸುತ್ತಿರುವಾಗ ಆಯ ತಪ್ಪಿ ಬಿದ್ದಿದ್ದು, ಜೊತೆಗಿದ್ದ ಪುತ್ರ ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಆದೂರು ಪೊಲೀಸರು ತಲುಪಿ ಮೃತದೇಹವನ್ನು ಮೇಲೆತ್ತಿದ್ದಾರೆ. ಕೊಳಕ್ಕೆ ತುಂಬಾ ಆಳವಿಲ್ಲದಿದ್ದರೂ ಕೆಸರಿನಲ್ಲಿ ಹೂತು ಹೋದ ಕಾರಣ ಮೇಲೆ ಬಂದಿರಲಿಲ್ಲ. ಬಳಿಕ ಕಾಸರಗೋಡು ಸರಕಾರಿ ಆಸ್ಪತ್ರೆಗೆ ಕೊಂಡು ಹೋದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.
ಮೃತರು ತಾಯಿ ಮೇಲತ್ತ್ ಸರೋಜಿನಿ ಅಮ್ಮ, ಪತ್ನಿ ಸೌದಾಮಿನಿ, ಮಕ್ಕಳಾದ ಜಯಕೃಷ್ಣನ್, ಜಯಲಕ್ಷ್ಮಿ, ಸಹೋದರರಾದ ಚಾತುಕುಟ್ಟಿ, ವೇಣುಗೋಪಾಲನ್ ನಂಬ್ಯಾರ್, ಸಹೋದರಿ ರಾಧಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.