ಕಾಸರಗೋಡು: ಕೊಳವೆ ಬಾವಿ ನಿರ್ಮಾಣದ ವಿಷಯದಲ್ಲಿ ಉಂಟಾದ ಘರ್ಷಣೆಯಲ್ಲಿ ಹಿತ್ತಿಲ ಮಾಲಕನನ್ನು ಕೊಲೆಗೈದ ಪ್ರಕರಣಕ್ಕೆ ಸಂಬAಧಿಸಿ ಮೂವರು ಸಹೋದರರೂ ಸೇರಿದಂತೆ ಒಟ್ಟು ನಾಲ್ಕು ಮಂದಿ ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶಲಾದ ಎ. ಮನೋಜ್ ಅವರು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 18 ವರ್ಷ ಕಠಿಣ ಸಜೆ ಹಾಗೂ 7.55 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಚಿತ್ತಾರಿಕಲ್ ಗ್ರಾಮದ ರಾವಣೀಶ್ವರ ಪಾಡಿಕಾನಂ ನಿವಾಸಿ ಪಿ.ಎ. ಕುಮಾರನ್ (57) ಎಂಬವರನ್ನು ಕೊಲೆಗೈದು ಅವರ ಪತ್ನಿ ವತ್ಸಲ (52), ಮಗ ಪ್ರಸಾದ್ (25) ಎಂಬವರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಆರೋಪಿಗಳಿಗೆ ಈ ಶಿಕ್ಷೆ ವಿಧಿಸಲಾಗಿದೆ. ಕೊಲೆಗೈಯ್ಯಲ್ಪಟ್ಟ ಕುಮಾರ್ರ ಸಹೋದರರೂ ಆಗಿರುವ ರಾವಣೀಶ್ವರ ಪಾಡಿಕಾನಂ ನಿವಾಸಿಗಳಾದ ಶ್ರೀಧರನ್ ಪಿ.ಎ. (56), ನಾರಾಯಣನ್ ಪಿ.ಎ. (48),
ಪದ್ಮನಾಭನ್ ಪಿ.ಎ. (63) ಮತ್ತು ನಾರಾಯಣನ್ರ ಮಗ ಸಂದೀಪ್ ಪಿ.ಎ. (33) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಕೊಲೆಗೀಡಾದ ಕುಮಾರನ್ರ ಪತ್ನಿ ಮತ್ತು ಮಗನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಅರ್ಹ ನಷ್ಟಪರಿಹಾರ ನೀಡುವಂತೆಯೂ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. 2016 ಡಿಸೆಂಬರ್ 31ರಂದು ರಾತ್ರಿ ಕುಮಾರನ್ರನ್ನು ಕೊಲೆಗೈದು ಅವರ ಪತ್ನಿ ಮತ್ತು ಪುತ್ರನನ್ನು ಕೊಲೆಗೈಯ್ಯಲೆತ್ನಿಸಿದ ಘಟನೆ ನಡೆದಿತ್ತು. ಕೊಲೆಗೀಡಾದ ಕುಮಾರನ್ರ ಹಿತ್ತಿಲಲ್ಲಿ ಕೊಳವೆ ಬಾವಿ ನಿರ್ಮಿಸಲೆಂದು ಬಂದ ವಾಹನವನ್ನು ಆರೋಪಿಗಳು ತಡೆದು ನಿಲ್ಲಿಸಿದ್ದರೆಂದೂ, ಅದರ ಹೆಸರಲ್ಲಿ ಪರಸ್ಪರ ವಾಗ್ವಾದ ಉಂಟಾಗಿ ಕೊನೆಗೆ ಅದು ಘರ್ಷಣೆಗೆ ತಿರುಗಿರುವುದೇ ಕೊಲೆಗೆ ಕಾರಣವೆಂದು ಈ ಬಗ್ಗೆ ಹೊಸದುರ್ಗ ಪೊಲೀಸರು ತನಿಖೆ ನಡೆಸಿ ನ್ಯಾಯಾಲ ಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು. ಅಂದು ಹೊಸದುರ್ಗ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಸಿ.ಕೆ. ಸುನಿಲ್ ಕುಮಾರ್ ಈ ಕೊಲೆ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿ ಕ್ಯೂಶನ್ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರೋಸಿಕ್ಯೂಟರ್ ಇ.ಕೆ. ಲೋಹಿತಾಕ್ಷನ್ ಮತ್ತು ಈ ಹಿಂದಿನ ಪ್ರೋಸಿಕ್ಯೂಟರ್ ಎ. ಬಾಲಕೃಷ್ಣನ್ ಎಂಬವರು ನ್ಯಾಯಾಲಯದಲ್ಲಿ ವಾದಿಸಿದ್ದರು.
