ಕೋಟಿ ಪಂಚಾಕ್ಷರಿ ಜಪಯಜ್ಞ ಇಂದು ಸಮಾಪ್ತಿ : ಸಂಜೆ ವೀರಮಣಿರಾಜುರಿಂದ ಭಕ್ತಿಗಾನ ಸಂಧ್ಯಾ
ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಜರಗುತ್ತಿ ರುವ ಕೋಟಿ ಪಂಚಾಕ್ಷರಿ ಜಪಯಜ್ಞ ಇಂದು ಸಮಾಪ್ತಿ ಯಾಗಲಿದೆ. ಬೆಳಿಗ್ಗೆ ರುದ್ರಹೋಮ ಜರಗಿ ಮಧ್ಯಾಹ್ನ ಪೂರ್ಣಾಹುತಿ ಗೊಂಡಿತು. ಈ ವೇಳೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಗಮಿಸಿ ಆಶೀರ್ವಚನ ನೀಡಿದರು. ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ 3ರಿಂದ ಕಡಪ್ಪುರ ಶ್ರೀ ಕುರುಂಬಾ ಭಜನಾ ಸಂಘದವರಿಂದ ಭಜನೆ, 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 7ರಿಂದ ಶಬರಿಮಲೆ ಹರಿವರಾಸನಂ ಪ್ರಶಸ್ತಿ ಪುರಸ್ಕೃತ ಕಲೈಮಾಮಣಿ ವೀರಮಣಿರಾಜು ಭಕ್ತಿಗಾನ ಗಂಧರ್ವ ಅಭಿಷೇಕ್ ರಾಜು ಚೆನ್ನೈಅವರಿಂದ ಭಕ್ತಿಗಾನ ಸಂಧ್ಯಾ ನಡೆಯಲಿದೆ. ನಿನ್ನೆ ಒಡಿಯೂರುಶ್ರೀ ಗುರು ದೇವಾನಂದ ಸ್ವಾಮೀಜಿ ಆಗಮಿಸಿ ಆಶೀರ್ವಚನ ನೀಡಿದ್ದಾರೆ. ಸಂಜೆ ಶ್ರೀಚಕ್ರಪೂಜೆ ಅಷ್ಟಾವಧಾನ ಸೇವೆಯೊಂದಿಗೆ ಜರಗಿದೆ.