ಕೋಟೆಕಣಿ: ಪುನಃ ಪ್ರತಿಷ್ಠಾ ಕಲಶ ಮಹೋತ್ಸವ ಇಂದಿನಿಂದ

ಕಾಸರಗೋಡು: ಕೋಟೆಕಣಿ ರಾಮನಗರ ಸಂಜೀವ ರಾವ್ ಕಂಪೌಂಡ್‌ನಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ಶ್ರೀ ನಾಗರಾಜ, ರಕ್ತೇಶ್ವರಿ, ಬ್ರಹ್ಮರಕ್ಷಸ್ಸು, ಗುಳಿಗ ಸಾನ್ನಿಧ್ಯಗಳ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ  ವಿವಿಧ ಕಾರ್ಯಕ್ರಮಗಳೊಂದಿಗೆ ಇಂದಿನಿಂದ ನಡೆಯಲಿದೆ. ಸಂಜೆ ೫ ಗಂಟೆಗೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ವಿವಿಧ ವೈದಿಕ ಕಾರ್ಯಕ್ರಮಗಳ ಆರಂಭ, ನಾಳೆ ಬೆಳಿಗ್ಗೆ ೬ಕ್ಕೆ ಗಣಪತಿ ಹೋಮ, ೭.೨೨ರಿಂದ ಶ್ರೀ ನಾಗರಾಜ, ರಕ್ತೇಶ್ವರಿ, ಬ್ರಹ್ಮರಕ್ಷಸ್ಸು, ಗುಳಿಗ ಸಾನ್ನಿಧ್ಯಗಳ ಪುನಃ ಪ್ರತಿಷ್ಠಾಪನೆ, ಪೀಠ ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಭಜನೆ ನಡೆಯಲಿದೆ.  ಮೇ ೨ರಂದು ಸಂಜೆ ೬ಕ್ಕೆ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ಭಂಡಾರ ಆಗಮನ, ೭ಕ್ಕೆ ದೈವಗಳ ಆರಂಭ, ೭.೩೦ಕ್ಕೆ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ ‘ಹರಿಭಜನೆ ಮಾಡು’ ಕಾರ್ಯಕ್ರಮ, ೩ರಂದು ಬೆಳಿಗ್ಗೆ ೯ರಿಂದ ಶ್ರೀ ರಕ್ತೇಶ್ವರಿ ಅಮ್ಮನ ದೈವಕೋಲ, ೧ರಿಂದ ಅನ್ನ ಸಂತರ್ಪಣೆ, ಸಂಜೆ ೪ಕ್ಕೆ ಭಂಡಾರ ನಿರ್ಗಮನ, ೪.೩೦ಕ್ಕೆ ಗುಳಿಗ ದೈವದ ಕೋಲ ನಡೆಯಲಿದೆ.

You cannot copy contents of this page