ಕೋಮು ದ್ವೇಷ ಕೆರಳಿಸುವ ರೀತಿಯ ಸಂದೇಶ ರವಾನೆ: ಎರಡು ಪ್ರಕರಣಗಳಲ್ಲಾಗಿ ಇಬ್ಬರು ಸೆರೆ
ಕಾಸರಗೋಡು: ಸೋಶ್ಯಲ್ ಮೀಡಿ ಯಾದಲ್ಲಿ ಕೋಮು ದ್ವೇಷ ಕೆರಳಿಸುವ ರೀತಿಯ ಸಂದೇಶಗಳನ್ನು ರವಾನಿಸಿದ ಎರಡು ಪ್ರಕರಣಗಳಲ್ಲಾಗಿ ಇಬ್ಬರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೂಡ್ಲು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ರಿಯಾಸ್ ಮೌಲವಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆ ಗೊಳಿಸಿದ ಆರೋಪಿ ಕೇಳುಗುಡ್ಡೆಯ ಅಜೀಶ್ ಅಲಿಯಾಸ್ ಅಪ್ಪು ಮತ್ತು ಕುಂಬಳೆ ಮೊಗ್ರಾಲ್ ಕೊಪಾಡಿಯ ಅಬೂಬಕರ್ ಸಿದ್ದೀಕ್ ಎಂಬವರು ಬಂಧಿತರಾದ ಆರೋಪಿಗಳು. ಇನ್ಸ್ಟಾಗ್ರಾಂನಲ್ಲಿ ಕೋಮು ಭಾವನೆ ಕೆರಳಿಸುವ ರೀತಿಯ ಸಂದೇಶ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಜೇಶ್ನನ್ನು ಬಂಧಿಸಲಾಗಿದೆ.