ಕೋರ್ಟ್ ಶುಲ್ಕ ಹೆಚ್ಚಳ ಹಿಂತೆಗೆಯಲು ಆಗ್ರಹಿಸಿ ಅಭಿಭಾಷಕ ಪರಿಷತ್ ಪ್ರತಿಭಟನೆ
ಕಾಸರಗೋಡು: ಕೋರ್ಟ್ ಶುಲ್ಕ ಹೆಚ್ಚಿಸಿದ ಕೇರಳ ಸರಕಾರದ ಕ್ರಮವನ್ನು ಕೂಡಲೇ ಹಿಂತೆಗೆಯಬೇಕೆಂದು ಭಾರತೀಯ ಅಭಿಭಾಷಕ ಪರಿಷತ್ ಆಗ್ರಹಿಸಿದೆ. ನ್ಯಾಯಕ್ಕಾಗಿ ನ್ಯಾಯಾ ಲಯಕ್ಕೆ ತಲುಪುವ ಜನಸಾಮಾನ್ಯರನ್ನು ಕೊಳ್ಳೆ ಹೊಡೆಯುವ ಸರಕಾರದ ತೀರ್ಮಾನ ಸಂಪೂರ್ಣ ಅನೀತಿ ಯಾಗಿದೆ. ಉಚಿತವಾಗಿ ನ್ಯಾಯ ಲಭ್ಯಗೊಳಿಸಬೇಕಾದ ಸರಕಾರ ನ್ಯಾಯಾಲಯಗಳನ್ನು ಆದಾಯ ಮಾರ್ಗವಾಗಿ ಕಂಡುಕೊಳ್ಳುತ್ತಿದ್ದು, ಇದು ಜನಸಾಮಾನ್ಯರಿಗೆ ನ್ಯಾಯ ನಿಷೇಧಿಸು ವುದಕ್ಕೆ ಸಮಾನವಾಗಿದೆಯೆಂದು ಅಭಿಪ್ರಾಯಪಟ್ಟಿದೆ. ಶುಲ್ಕ ಹೆಚ್ಚಳವನ್ನು ಪ್ರತಿಭಟಿಸಿ ಭಾರತೀಯ ಅಭಿಭಾಷಕ ಪರಿಷತ್ ನೇತೃತ್ವದಲ್ಲಿ ನ್ಯಾಯವಾದಿ ಗಳು ಪ್ರತಿಭಟನಾ ಧರಣಿ ನಡೆಸಿದರು. ಗಜೆಟ್ ವಿಜ್ಞಾಪನೆಯ ಪ್ರತಿಯನ್ನು ಉರಿಸಿ ಪ್ರತಿಭಟನೆ ವ್ಯಕ್ತಪಡಿಸಲಾ ಯಿತು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿಗಳಾದ ಕರುಣಾಕರನ್ ನಂಬ್ಯಾರ್, ಪಿ. ಮುರಳೀಧರನ್, ಸದಾನಂದ ರೈ, ಸದಾನಂದ ಕಾಮತ್, ಬಿ. ಗಣೇಶ್, ಜಯ ಅಡೂರು, ಕೆ.ಎಂ. ಬೀನಾ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ನವೀನ್‌ರಾಜ್ ಸ್ವಾಗತಿಸಿ, ನ್ಯಾಯವಾದಿ ರಾಹುಲ್‌ದಾಸ್ ವಂದಿಸಿದರು.