ಕೋಳ್ಯೂರು ಕ್ಷೇತ್ರ ಕಳವು ಆರೋಪಿಗಳ ಬಂಧನಕ್ಕೆ ಒತ್ತಾಯ
ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಕಳವು ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಅದಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಿ ತನಿಖೆ ತ್ವರಿತಗೊಳಿಸುವಂತೆ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿ ಬಿಜೋಯ್ ಅವರನ್ನು ಕ್ಷೇತ್ರ ಟ್ರಸ್ಟಿ ಕೃಷ್ಣ ಕುಮಾರ್ ಯು, ವಿಠಲ್ ಭಟ್ ಮೊಗಸಾಲೆ, ಗಣೇಶ್ ಭಟ್ ವಾರಣಾಸಿ, ಭಾಸ್ಕರ ಕೋಳ್ಯೂರು, ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ರೈ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಭೇಟಿಯಾಗಿ ಒತ್ತಾಯಿಸಿದರು. ಕಳೆದ ಶುಕ್ರವಾರ ರಾತ್ರಿ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಸಾಮಗ್ರಿಗಳು ಹಾಗೂ ಸುಮಾರು 10 ಪವನ್ ಚಿನ್ನಾಭರಣಗಳನ್ನು ದೋಚಿದ್ದಾರೆ. ಕ್ಷೇತ್ರದ ಸಿ.ಸಿ ಕ್ಯಾಮರಾದಲ್ಲಿ ಓರ್ವ ಕಳ್ಳನ ದೃಶ ಕಂಡುಬಂದಿದೆ.