ಕ್ಯಾನ್ಸರ್: 10 ಲಕ್ಷಕ್ಕೂ ಹೆಚ್ಚು ಮಹಿಳೆಯರ ಸ್ಕ್ರೀನಿಂಗ್; 86 ಮಂದಿಯಲ್ಲಿ ಕ್ಯಾನ್ಸರ್ ಪತ್ತೆ

ಕಾಸರಗೋಡು: ಕ್ಯಾನ್ಸರ್ ರೋಗ ಪ್ರತಿರೋಧಕ ಚಿಕಿತ್ಸೆಗಾಗಿ ರಾಜ್ಯ ಆರೋಗ್ಯ ಇಲಾಖೆ ಆರೋಗ್ಯ ಹಾಗೂ ‘ಆರೋಗ್ಯ ಆನಂದ ದೂರೀಕರಿಸಿ ಅರ್ಬುದ’ ಎಂಬ ಹೆಸರಲ್ಲಿ ಜ್ಯಾರಿಗೊಳಿಸಲಾಗಿರುವ ಕ್ಯಾನ್ಸರ್ ರೋಗ ತಡೆ ಅಭಿಯಾನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ಒಟ್ಟು 10,69,703 ಮಂದಿ ಮಹಿಳೆಯರನ್ನು ಸ್ಕ್ರೀನಿಂಗ್ಗೊಳಪಡಿಸಲಾಗಿದೆ ಎಂದು ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. ಇದರಲ್ಲಿ 86 ಮಂದಿಗೆ ಕ್ಯಾನ್ಸರ್ ರೋಗ ತಗಲಿರುವುದಾಗಿ ಖಾತರಿಪಡಿಸಲಾಗಿದೆ. ರಾಜ್ಯದ 1577 ಆಸ್ಪತ್ರೆಗಳಲ್ಲಾಗಿ ಈ ಸ್ಕ್ರೀನಿಂಗ್ ನಡೆಸಲಾಗಿದೆ. ಹೀಗೆ ಸ್ಕ್ರೀನಿಂಗ್ಗೊಳಪಟ್ಟವರಲ್ಲಿ 42,049 ಮಂದಿಯನ್ನು ಎರಡನೇ ಹಂತದ ವೈದ್ಯಕೀಯ ಪರೀಕ್ಷೆ ಗೊಳಪಡಿ ಸುವಂತೆ ನಿರ್ದೇಶ ನೀಡಲಾಗಿದೆ. ಸ್ಕ್ರೀನಿಂಗ್ಗೊಳಗಾದ ಮಹಿಳೆಯರಲ್ಲಿ 26,530 ಮಂದಿಗೆ ಸ್ತನಾರ್ಬುದ ತಗಲಿರುವ ಶಂಕೆ ಉಂಟಾಗಿದೆ.

ಇವರನ್ನು ಎರಡನೇ ಹಂತದ ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ನಿರ್ದೇಶ ನೀಡಲಾಗಿದೆ. ಇನ್ನು 7,72,083 ಮಂದಿಯನ್ನು ಗರ್ಭಾಶಯ ಕ್ಯಾನ್ಸರ್ ಸ್ಕ್ರೀನಿಂಗ್ಗೊಳಪಡಿಸಲಾಗಿದ್ದು, ಅದರಲ್ಲಿ 22705 ಮಂದಿಯನ್ನು ಎರಡನೇ ಹಂತದ ಪರೀಕ್ಷೆಗೊಳ ಪಡಿಸುವ ನಿರ್ದೇಶ ನೀಡಲಾಗಿದೆ. 6,52,355 ಮಂದಿಯನ್ನುಬಾಯಿ ಕ್ಯಾನ್ಸರ್ ಸ್ಕ್ರೀನಿಂಗ್ಗೊಳಪಡಿ ಸಲಾಗಿದ್ದು, ಅದರಲ್ಲಿ 2,238 ಮಂದಿಯನ್ನು ಎರಡನೇ ವೈದ್ಯಕೀಯ ಪರೀಕ್ಷೆಗೊಳಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಸ್ಕ್ರೀನಿಂಗ್ನಲ್ಲಿ ಕ್ಯಾನ್ಸರ್ ರೋಗ ತಗಲಿರುವುದು ಗುರುತಿಸಲಾ ಗಿರುವ 86| ಮಂದಿಯಲ್ಲಿ ಆರಂಭಿಕ ಹಂತದ ಕ್ಯಾನ್ಸರ್ ತಗಲಿರುವುದ ರಿಂದಾಗಿಯೂ ಅದನ್ನು ಚಿಕಿತ್ಸೆ ಮೂಲಕ ಗುಣಪಡಿಸಲು ಸಾಧ್ಯವಾಗ ಲಿದೆ ಎಂದು ಸಚಿವೆ ತಿಳಿಸಿದ್ದಾರೆ.

RELATED NEWS

You cannot copy contents of this page