ಕಾಸರಗೋಡು: ಕ್ವಾರ್ಟರ್ಸ್‌ಗೆ ಕಳ್ಳರು ನುಗ್ಗಿ 12 ಪವನ್ ಚಿನ್ನದೊಡವೆ ಕಳವುಗೈದ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಹೊಸದುರ್ಗ ಪೇಟೆಯ ಟಿ.ಬಿ. ಜಂಕ್ಷನ್ ಮಸೀದಿ ಬಳಿಯ ಪಿ.ಬಿ. ರಾಬಿಯಾ ಎಂಬವರು ವಾಸಿಸುತ್ತಿರುವ ಕ್ವಾರ್ಟರ್ಸ್‌ನಲ್ಲಿ ಈ ಕಳವು ನಡೆದಿದೆ. ಕ್ವಾರ್ಟರ್ಸ್‌ನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಬೆಡ್‌ರೂಂನೊಳ ಗಿದ್ದ ಕಪಾಟನ್ನು ತೆರೆದು ಅದರೊಳಗೆ ಇರಿಸಲಾಗಿದ್ದ ಚಿನ್ನದೊಡವೆ ಕಳವುಗೈ ದಿದ್ದಾರೆ. ಚಿನ್ನ ಇರಿಸಿದ್ದ ಕಪಾಟಿನ ಬಾಗಿಲನ್ನು ಕಳ್ಳರು ಒಡೆದಿರಲಿಲ್ಲ. ಅಲ್ಲಿರಿ ಸಲಾಗಿದ್ದ ಕೀಲಿ ಗೊಂಚಲನ್ನು ಉಪ ಯೋಗಿಸಿ ಕಳ್ಳರು ಕಪಾಟಿನ ಬಾಗಲು ತೆರೆದು ಕಳವು ನಡೆಸಿದ್ದಾರೆ ನ್ನಲಾಗಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
