ಕ್ಷೇಮ ಚಟುವಟಿಕೆಗಳಿಗೆ ಹಣವಿಲ್ಲ : ಮುಸ್ಲಿಂ ಲೀಗ್‌ನಿಂದ ಬದಿಯಡ್ಕದಲ್ಲಿ ಪ್ರತಿಭಟನೆ

ಬದಿಯಡ್ಕ: ಅಭಿವೃದ್ಧಿ ಕೆಲಸಗಳಿಗೆ, ಕ್ಷೇಮ ಚಟುವಟಿಕೆಗಳಿಗೆ ಮೊತ್ತ ಮಂಜೂರು ಮಾಡದೆ ತ್ರಿಸ್ತರ ಪಂಚಾಯತ್ ವ್ಯವಸ್ಥೆಯನ್ನು ನಾಶಪಡಿಸಲು ಯತ್ನಿಸುವ ಎಡ ಪಕ್ಷ ಸರಕಾರದ ತಪ್ಪಾದ ಕ್ರಮವನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್‌ನ ಜನ ಪ್ರತಿನಿಧಿಗಳು ಬದಿಯಡ್ಕ ಪಂಚಾಯತ್ ಕಚೇರಿ ಮುಂಭಾಗ ಸಹಿಗೋಡೆ ಮುಷ್ಕರ ನಡೆಸಿದರು. ಬಡವರಿಗೆ ಲೈಫ್ ವಸತಿ ಯೋಜನೆ, ಕ್ಷೇಮ ಪಿಂಚಣಿ ಮೊಟಕುಗೊಂಡು ತಿಂಗಳು ಹಲವು ಕಳೆದಿದೆ ಎಂದು ಅವರು ಆರೋಪಿಸಿದರು. ಬಜೆಟ್‌ನಲ್ಲಿ ಮೀಸಲಿಟ್ಟ ಪಾಲನ್ನು ತ್ರಿಸ್ತರ ಪಂಚಾಯತ್‌ಗಳಿಗೆ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಷ್ಕರದಲ್ಲಿ ಆಗ್ರಹಿಸಲಾಯಿತು. ಕಾಸರಗೋಡು ಮಂಡಲ ಮುಸ್ಲಿಂ ಲೀಗ್ ಅಧ್ಯಕ್ಷ ಮಾಹಿನ್ ಕೇಳೋಟ್ ಉದ್ಘಾಟಿಸಿದರು. ಪಂ. ಅಧ್ಯಕ್ಷೆ ಬಿ. ಶಾಂತ ಅಧ್ಯಕ್ಷತೆ ವಹಿಸಿದರು. ಪಂ. ಸದಸ್ಯರು ಭಾಗವಹಿಸಿದರು. ಹಮೀದ್ ಪಳ್ಳತ್ತಡ್ಕ ಸ್ವಾಗತಿಸಿ, ಅಬ್ದುರಹ್‌ಮಾನ್ ಕುಂಜಾರ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page