ಕಾಸರಗೋಡು: ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಬಿಲ್‌ಗಳು ಹಲವು ಆಸ್ಪತ್ರೆಗಳಲ್ಲಿ ಹಲವು ರೀತಿಯಲ್ಲಿದೆ. ಮೆನೇಜ್‌ಮೆಂಟ್ ತೀರ್ಮಾನಕ್ಕನುಸಾರವಾಗಿ ರೋಗಿಗಳನ್ನು ಹಿಂಡಲಾಗುತ್ತಿದೆ. ಸರಕಾರಕ್ಕೆ ಯಾವುದೇ ನಿಯಂತ್ರಣ ಇಲ್ಲದ ರೀತಿಯಲ್ಲಿ ಆಸ್ಪತ್ರೆಗಳು ಬಿಲ್ ಸಿದ್ಧಪಡಿಸುತ್ತಿವೆ. ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲುಮಾಡುವಾಗ ಹೇಳುವ ಪ್ಯಾಕೇಜ್‌ನ ಮೊತ್ತವಲ್ಲ ಡಿರ್ಚಾರ್ಜ್ ಮಾಡುವಾಗ ಕಂಡುಬರುವುದು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ವಿವಿಧ ಚಿಕಿತ್ಸೆಗಳಿಗೆ, ಉಪಕರಣಗಳಿಗೆ ವಸೂಲಿ ಮಾಡುವ ದರಗಳನ್ನು ಏಕೀಕರಿಸಿ ಪ್ರತಿಯೊಂದಕ್ಕೂ ನಿಗದಿತ ದರವನ್ನು ವಸೂಲಿ ಮಾಡುವಂತೆ ಸರಕಾರ ತೀರ್ಮಾನ ಕೈಗೊಳ್ಳಬೇಕೆಂದು ಕನ್ಸ್ಯೂಮರ್ ಅಫೇರ್ಸ್ ಡಿಪಾರ್ಟ್‌ಮೆಂಟ್ ಕಾಸರಗೋಡು ಜಿಲ್ಲಾ ಸಮಿತಿ ಆಗ್ರಹಿಸಿದೆ. ಬಾರ್ಬರ್ ಶಾಪ್, ಹೋಟೆಲ್‌ಗಳಲ್ಲಿ ನಿಶ್ಚಿತ ದರ ವಸೂಲಿ ಮಾಡಬಹುದೆಂಬ ಕಾನೂನು ತರುವಾಗ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ರೋಗಿಗಳಿಂದ ಹಣ ವಸೂಲಿ ಮಾಡುವುದನ್ನು ನಿಯಂತ್ರಿಸಲೇಬೇಕು. ಆಸ್ಪತ್ರೆಗಳಲ್ಲಿ ಬಹಿರಂಗವಾಗಿ ದರ ಪಟ್ಟಿ ಬೋರ್ಡ್‌ಗಳನ್ನು ಸ್ಥಾಪಿಸ ಬೇಕೆಂದು ಸಂಘಟನೆಯ ಜಿಲ್ಲಾ ಸಮಿತಿ ಆಗ್ರಹಿಸಿದೆ. ರಾಷ್ಟ್ರೀಯ ಗ್ರಾಹಕರ ಹಕ್ಕು ದಿನಾಚರಣೆಯಂ ಗವಾಗಿ ಆಯೋಜಿಸಿದ ವಿಚಾರಗೋ ಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಬೈರ್ ಪಡ್ಪು ಅಧ್ಯಕ್ಷತೆ ವಹಿಸಿದರು. ಎನ್‌ಸಿಪಿ (ಎಸ್) ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಕೈಕಂಬ ಉದ್ಘಾಟಿಸಿದರು. ಜಿಲ್ಲಾ ಕಾರ್ಯ ದರ್ಶಿ ರಾಧಾಕೃಷ್ಣನ್ ಸ್ವಾಗತಿಸಿದರು. ಹಲವರು ಮಾತನಾಡಿದರು.
