ಖಾಸಗಿ ಕಟ್ಟಡದಿಂದ ಕಾಂಕ್ರೀಟ್ ತುಂಡುಗಳು ಬಿದ್ದು ಸ್ಕೂಟರ್ ಹಾನಿ: ಅಪಾಯದಿಂದ ಪಾರು
ಉಪ್ಪಳ: ಉಪ್ಪಳ ಬಸ್ ನಿಲ್ದಾಣದ ಬಳಿಯಲ್ಲಿ ವ್ಯಾಪಾರ ಸಂಸ್ಥೆಗಳು ಹೊಂದಿರುವ ಖಾಸಗಿ ಕಟ್ಟಡದ ಸನ್‌ಶೇಡ್‌ನ ಕಾಂಕ್ರೀಟ್ ತುಂಡುಗಳು ಕೆಳಭಾಗದಲ್ಲಿರುವ ವ್ಯಾಪಾರ ಸಂಸ್ಥೆಗಳ ಮುಂಭಾಗಕ್ಕೆ ಬಿದ್ದು ವ್ಯಾಪಾರಿ ಅಬ್ದುಲ್ ರಹಿಮಾನ್ ಎಂಬವರ ಸ್ಕೂಟರ್ ಹಾನಿಗೀಡಾಗಿದೆ. ನೌಕರ ಹಾಗೂ ಗ್ರಾಹಕರು ಕೂದಲೆಳೆ ಅಂತರದಿAದ ಪಾರಾಗಿದ್ದಾರೆ. ಇದರಿಂದ ಸಾವಿರಾರು ರೂ. ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಅಲ್ಲದೆ ಎರಡು ವಾರದ ಹಿಂದೆ ಇದೇ ಕಟ್ಟಡದ ಜ್ಯೂಸ್ ವ್ಯಾಪಾರಿಯಾದ ಅಬ್ದುಲ್ಲ ಎಂಬವರ ಅಂಗಡಿಯ ಶೀಟ್‌ನ ಮೇಲ್ಭಾಗಕ್ಕೆ ಬಿದ್ದು ಶೀಟ್ ಹಾನಿಗೊಂಡಿದೆ. ಪದೇ ಪದೇ ಕಾಂಕ್ರೀಟ್ ತುಂಡುಗಳು ಉದುರುತ್ತಿ ರುವುದರಿಂದ ಈ ಪರಿಸರದಲ್ಲಿ ನಡೆದಾಡುವುದೇ ಅಪಾಯಕರ ವಾಗಿದೆ. ಈ ಬಗ್ಗೆ ಕಟ್ಟಡ ಮಾಲಕನಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ಮಂಗಲ್ಪಾಡಿ ಪಂಚಾಯತ್ ಅಧಿಕಾರಿಗಳಿಗೂ ದೂರು ನೀಡುವು ದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ.