ಖೋಟಾನೋಟು ಪತ್ತೆ ಪ್ರಕರಣ: ಕೇಂದ್ರ ಏಜೆನ್ಸಿ ತನಿಖೆಗೆ ಚಾಲನೆ

ಕಾಸರಗೋಡು: ಬಾಡಿಗೆ ಮನೆಯಲ್ಲಿ ಬಚ್ಚಿಡಲಾಗಿದ್ದ ಕೇಂದ್ರ ನಿಷೇಧಿಸಿದ ೨೦೦೦ ರೂ. ಮೌಲ್ಯದ ೬.೬೯ ಕೋಟಿ ರೂ. ವಶಪಡಿಸಿದ ಪ್ರಕರಣದಲ್ಲಿ ಕೇಂದ್ರ ಏಜೆನ್ಸಿ ತನಿಖೆಗೆ ಚಾಲನೆ ನೀಡಿದೆ. ಕೇರಳ ಪೊಲೀಸರು ಆರಂಭದಲ್ಲಿ ನಡೆಸಿದ ತನಿಖೆಯಿಂದ ಹೆಚ್ಚಿನ ಪ್ರಗತಿ ಉಂಟಾಗದ ಕಾರಣ  ಕೇಂದ್ರ ಏಜೆನ್ಸಿ ಈ ಪ್ರಕರಣವನ್ನು ಕೈಗೆತ್ತಿ ಕೊಂಡಿದೆ. ಹೊಸದುರ್ಗಕ್ಕೆ ಸಮೀಪದ ಅಂಬಲತ್ತರ ಪಾರಪ್ಪಳ್ಳಿ ಗುರುಪುರದ ಬಾಡಿಗೆ ಮನೆಯಲ್ಲಿ ನೋಟುಗಳ ಬೃಹತ್ ದಾಸ್ತಾನು ಪತ್ತೆಯಾಗಿತ್ತು. ಅಂ ಬಲತ್ತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಜೀಶ್‌ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ನೋಟುಗಳನ್ನು ವಶಪಡಿಸಿತ್ತು. ಅಕ್ರಮವಾಗಿ ಬಚ್ಚಿಟ್ಟಿದ್ದ ಕರೆನ್ಸಿಗಳಲ್ಲಿ ಹೆಚ್ಚಿನವು ಖೋಟಾನೋ ಟುಗಳಾಗಿದ್ದು, ಈ ಪ್ರಕರಣದಲ್ಲಿ ಇಬ್ಬ ರನ್ನು ಸೆರೆ ಹಿಡಿಯಲಾಗಿತ್ತು. ವಯ ನಾಡಿನಿಂದ ಅಲ್ಲಿನ ಪೊಲೀಸರ ಸಹಾ ಯದೊಂದಿಗೆ ಆರೋಪಿಗಳನ್ನು ಬಂಧಿಸ ಲಾಗಿತ್ತು.

ಪೆರಿಯಾ ಸಿ.ಎಚ್. ಹೌಸ್‌ನ ಅಬ್ದುಲ್ ರಜಾಕ್ (೪೯), ಮೂಲತಃ ಕರ್ನಾಟಕ ಪುತ್ತೂರು ನಿವಾಸಿಯಾಗಿರುವ ಈಗ ಬೇಕಲ ಮೌವ್ವಲ್‌ನಲ್ಲಿ ವಾಸಿಸುವ ಸುಲೈಮಾನ್ (೫೨) ಬಂಧಿತರಾಗಿದ್ದಾರೆ. ಇವರನ್ನು ವಿಚಾರಣೆ ನಡೆಸಿದ ಕೇರಳ ಪೊಲೀಸರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಆ ಬಳಿಕ ಕೇಂದ್ರ ಏಜೆನ್ಸಿ ತನಿಖೆಯನ್ನು ಕೈಗೆತ್ತಿಕೊಂಡಿದೆ. ಆರೋಪಿಗಳು ಈ ಮೊದಲು ೧೦೦೦ ರೂ. ಮೌಲ್ಯದ ನೋಟನ್ನು ವಿತರಿಸಿರುವುದಾಗಿಯೂ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ ಈ ನೋಟುಗಳನ್ನು ಮುದ್ರಿಸಿದ್ದು ಎಲ್ಲಿ, ಯಾರು ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಕೇಂದ್ರ ಏಜೆನ್ಸಿ ತನಿಖೆ ನಡೆಸುತ್ತಿದೆ. ತಾವು ವಿತರಕರು ಮಾತ್ರವಾಗಿದ್ದು, ಇದರ ಹಿಂದೆ ಕಲ್ಲಿಕೋಟೆ, ಮಲಪ್ಪುರ ನಿವಾಸಿಗಳಾದ ಕೆಲವರು ಇದ್ದಾರೆಂದು ಆರೋಪಿಗಳು ಹೇಳಿಕೆ ನೀಡಿದ್ದರು.

RELATED NEWS

You cannot copy contents of this page