ಗಣರಾಜ್ಯೋತ್ಸವ ದಿನಾಚರಣೆ ಸಚಿವೆ ಡಾ. ಬಿಂದುರಿಂದ ಧ್ವಜವಂದನೆ
ಕಾಸರಗೋಡು: ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ. ಪರೇ ಡ್‌ನಲ್ಲಿ ಉನ್ನತ ಶಿಕ್ಷಣ ಸಾಮಾಜಿಕ ನೀತಿ ಇಲಾಖೆ ಸಚಿವೆ ಡಾ. ಆರ್. ಬಿಂದು ಧ್ವಜ ವಂದನೆ ಸ್ವೀಕರಿಸುವರು. ವಿದ್ಯಾನಗರ ನಗರಸಭಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ೨೦ಪ್ಲಾಟೂನ್‌ಗಳು ಪರೇಡ್‌ನಲ್ಲಿ ಭಾಗವಹಿಸಲಿವೆ. ಲೋಕಲ್ ಪೊಲೀಸ್, ಮಹಿಳಾ ಪೊಲೀಸ್, ಸಶಸ್ತ್ರ ಪೊಲೀಸ್, ಅಬಕಾರಿ, ಎನ್‌ಸಿಸಿ, ಸ್ಕೌಟ್ ಆಂಡ್ ಗೈಡ್ಸ್, ಸ್ಟುಡೆಂಟ್ ಪೊಲೀಸ್ ಕೆಡೆಟ್, ಆಪ್ತಮಿತ್ರ, ಸಿವಿಲ್ ಡಿಫೆನ್ಸ್, ನವೋದಯ ಸ್ಕೂಲ್, ಜೈಮಾತಾ ಸ್ಕೂಲ್ ಎಂಬಿವುಗಳ ಬ್ಯಾಂಡ್ ಮೇಳ ಪರೇಡ್‌ನಲ್ಲಿ ಭಾಗವಹಿಸಲಿದೆ. ೨೬ರಂದು ಬೆಳಿಗ್ಗೆ ೭.೩೦ಕ್ಕೆ ಪ್ಲಾಟೂನ್‌ಗಳು ಮೈದಾನದಲ್ಲಿ ಸೇರಲಿದೆ. ಪರೇಡ್ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ಸರಕಾರಿ ನೌಕರರು, ಸಾರ್ವಜನಿಕರು, ವಿದ್ಯಾರ್ಥಿಗಳು ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ತಿಳಿಸಿದ್ದಾರೆ.