ಗಫೂರ್ ಹಾಜಿ ಕೊಲೆ ಪ್ರಕರಣ : ಇನ್ನೋರ್ವ ಸೆರೆ; ಏಳಕ್ಕೇರಿದ ಆರೋಪಿಗಳ ಸಂಖ್ಯೆ
ಕಾಸರಗೋಡು: ಪಳ್ಳಿಕ್ಕರೆ ಪೂಚಕ್ಕಾಡ್ ಫಾರೂಕಿ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಗಲ್ಫ್ ಉದ್ಯೋಗಿ ಸಿ.ಎಂ. ಅಬ್ದುಲ್ ಗಫೂರ್ ಹಾಜಿ (55)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬAಧಿಸಿ ಇನ್ನೋರ್ವ ಆರೋಪಿ ಯನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಕಾಸರಗೋಡು ಡಿಸಿಆರ್ಬಿ ಡಿವೈಎಸ್ಪಿ ಕೆ.ಜೆ. ಜೋನ್ಸನ್ ಬಂಧಿಸಿದ್ದಾರೆ.
ಪಳ್ಳಿಕ್ಕೆರೆ ಪೂಚಕ್ಕಾಡ ಬಿಸ್ಮಿಲ್ಲಾ ರೋಡ್ನ ಅಲ್ ಬದರ್ ಮಂಜಿಲ್ ನಿವಾಸಿ ಈ ಹಿಂದೆ ಗಲ್ಫ್ನಲ್ಲಿದ್ದ ಪಿ.ಎಸ್. ಸೈಫುದ್ದೀನ್ ಬಾದ್ಷಾ (33) ಬಂಧಿತ ಆರೋಪಿ. ಈತನನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ ಗಫೂರ್ ಹಾಜಿಯವರಿಂದ ಮಂತ್ರವಾದದ ಹೆಸರಲ್ಲಿ ಪಡೆದಿದ್ದ 596 ಪವನ್ (4.76 ಕಿಲೋ) ಚಿನ್ನವನ್ನು ಮಾರಾಟ ಮಾಡಲು ಈ ಪ್ರಕರಣದ ಇತರ ಆರೋಪಿಗಳಾದ ಉದುಮ ಬಾರಾ ಮೀತ್ತಲ್ ಮಾಂuಟಿಜeಜಿiಟಿeಜಡ್ ಕಳಕುನ್ನಿನಲ್ಲಿ ಈಗ ವಾಸಿಸುತ್ತಿರುವ ಮೂಲತಃ ಮಧೂರು ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಟಿ.ಎಂ. ಉಬೈಸ್ (ಉಮೈಸ್ 32), ಆತನ ಪತ್ನಿ ಮಂತ್ರವಾದಿನಿ ಶಮೀಮ ಕೆ.ಎಚ್ (35) ಮತ್ತು ಪೂಚಕ್ಕಾಡ್ ದೊಡ್ಡ ಮಸೀದಿ ಸಮೀಪದ ಪಿ.ಎಂ. ಅನ್ಸಿಫಾ (36) ಎಂಬಿವರಿಗೆ ಸಹಯ ಮಾಡಿದ ಆರೋಪದಂತೆ ಸೈಫುದ್ದೀನ್ ಬಾದ್ಶಾನನ್ನು ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯಾಗಿ ಒಳಪಡಿಸಿದ್ದಾರೆ. ಮಾತ್ರವಲ್ಲ ಮಂತ್ರವಾದದ ಮೂಲಕ ಒಡವೆಗಳನ್ನು ಇಮ್ಮಡಿಗೊಳಿಸಲು ಮಂತ್ರವಾದಿನಿ ಶಮೀಮ ಮತ್ತು ಇತರ ಆರೋಪಿಗಳು ‘ಪಾತುಕುಟ್ಟಿ’ ಎಂಬ ಹೆಸರಲ್ಲಿ ಎಂಟು ಮಂದಿ ಒಳಗೊಂಡ ವಾಟ್ಸಪ್ ಗ್ರೂಪ್ ತಯಾರಿಸಿದ್ದು, ಅದರಲ್ಲಿ ಸೈಫುದ್ದೀನ್ ಬಾದ್ಷಾ ಕೂಡಾ ಓರ್ವ ಸದಸ್ಯನಾಗಿ ದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಈತನ ಬಂಧನದ ಮೂಲಕ ಈ ಕೊಲೆ ಪ್ರಕರಣದ ಆರೋಪಿಗಳ ಸಂಖ್ಯೆ ಈಗ ಏಳಕ್ಕೇರಿದೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಹೆಚ್ಚುವರಿ ತನಿಖೆಗಾಗಿ ಸೈಫುದ್ದೀನ್ನನ್ನು ನ್ಯಾಯಾಲ ಯದ ಅನುಮತಿಯೊಂದಿಗೆ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲಾಗುವು ದೆಂದು ಪೊಲೀಸರು ತಿಳಿಸಿದ್ದಾರೆ. 2023 ಎಪ್ರಿಲ್ 14ರಂದು ಅಬ್ದುಲ್ ಗಫೂರ್ ಹಾಜಿಯನ್ನು ಕೊಲೆಗೈಯ್ಯಲಾಗಿತ್ತು. ಗಲ್ಫ್ ಉದ್ಯಮಿಯಾಗಿದ್ದ ಇವರು 2023 ರಲ್ಲಿ ಅಲ್ಲಿಂದ ಊರಿಗೆ ಹಿಂತಿರುಗಿ ದ್ದರು. ಅದೇ ಸಮಯದಲ್ಲೇ ಸೈಫುದ್ದೀ ನ್ ಬಾಷಾ ಕೂಡಾ ಗಲ್ಫ್ನಿಂದ ಹಿಂತಿರುಗಿದ್ದನೆAದು ಪೊಲೀಸರು ತಿಳಿಸಿದ್ದಾರೆ.
ಮಂತ್ರವಾದಕ್ಕಾಗಿ ಈ ಪ್ರಕರಣದ ಮೂವರು ಆರೋಪಿಗಳು ಅಬ್ದುಲ್ ಗಫೂರ್ ಹಾಜಿಯಿಂದ ಚಿನ್ನದೊಡವೆ ಪಡೆದಿದ್ದರು. ಅದನ್ನು ಅಬ್ದುಲ್ ಗಫೂರ್ ಹಾಜಿ ಹಿಂದಿ ರುಗಿಸುವಂತೆ ಈ ಆರೋಪಿಗಳಿಗೆ ತಿಳಿಸಿದ್ದರು. ಆ ಬಳಿಕ ಅಬ್ದುಲ್ ಗಫೂರ್ ಹಾಜಿಯನ್ನು ಕೊಲೆಗೈಯ್ಯಲಾಗಿತ್ತು.
ಈ ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದಾರೆ. ಆ ಪೈಕಿ ನಾಲ್ಕನೇ ಆರೋಪಿ ಮಧೂರು ಕೊಲ್ಯ ನಿವಾಸಿ ಅಯಿಷಾ (43)ಳಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಕಳೆದವಾರ ಜಾಮೀನು ಮಂಜೂರು ಮಾಡಿತ್ತು. ಉಳಿದ ಆರೋಪಿಗಳಾದ ಉಬೈಸ್, ಶಮೀಮ ಮತ್ತು ಅನ್ಸೀಫಾ ಈಗಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನು ಕೋರಿ ಇವರು ಸಲ್ಲಿಸಿದ್ದ ಅರ್ಜಿ ನ್ಯಾಯಾಲಯ ತಿರಸ್ಕರಿಸಿತ್ತು.