ಗಲ್ಫ್ ಉದ್ಯಮಿಯ ಕೊಲೆ: ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆಯಲು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ; ಕೊಲೆಗೆ ಮೊದಲು ಆರೋಪಿಗಳು ಕರೆದ ನ್ಯಾಯವಾದಿಗೆ ಪೊಲೀಸ್ ನೋಟೀಸು ಜಾರಿ
ಕಾಸರಗೋಡು:2023 ಎಪ್ರಿಲ್ 14ರಂದು ಗಲ್ಫ್ ಉದ್ಯಮಿ ಬೇಕಲಕ್ಕೆ ಸಮೀಪದ ಪೂಚಕ್ಕಾಡ್ ಮಸೀದಿ ಬಳಿಯ ಬೈತುಲ್ ಮಂಜಿಲ್ ನಿವಾಸಿ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (55)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಈಗ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳನ್ನು ಈ ಪ್ರಕರಣದ ಹೆಚ್ಚುವರಿ ತನಿಖೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿ ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಬೇಕಲ ಪೊಲೀಸರು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಆರೋಪಿಗಳನ್ನು ನ್ಯಾಯಾಂಗ ಬಂಧನದಿಂದ ಪೊಲೀಸರು ಈ ಹಿಂದೆ ಎರಡು ಬಾರಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ಆ ಬಳಿಕ ಅವರನ್ನು ಮತ್ತೆ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿ ಪೊಲೀಸರು ಹೊಸದುರ್ಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ನ್ಯಾಯಾ ಲಯ ತಳ್ಳಿಹಾಕಿತ್ತು. ಅದರಿಂದಾಗಿ ಪೊಲೀಸರು ಇದೇ ಬೇಡಿಕೆ ಮುಂದಿರಿಸಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಈಗ ಅರ್ಜಿ ಸಲ್ಲಿಸಿದ್ದಾರೆ.
ಮಂತ್ರವಾದ ಹೆಸರಲ್ಲಿ ಆರೋಪಿಗಳು ಪಡೆದುಕೊಂಡಿದ್ದ ರೆನ್ನಲಾದ 596 ಪವನ್ ಚಿನ್ನದ ಪೈಕಿ ಒಂದು ಪಾಲನ್ನು ಪೊಲೀಸರು ವಿವಿಧ ಜ್ಯುವೆಲ್ಲರಿಗಳಿಂದ ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಈ ಚಿನ್ನವನ್ನು ಆರೋಪಿಗಳು ವಿವಿಧ ಚಿನ್ನದಂಗಡಿಗಳಿಗೆ ಮಾರಾಟ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಇನ್ನು ಬಾಕಿ ಉಳಿದಿರುವ ಚಿನ್ನವನ್ನು ಪತ್ತೆಹಚ್ಚುವ ಯತ್ನದಲ್ಲಿ ಪೊಲೀಸರು ಮುಂದುವರಿಸಿದ್ದು, ಅದಕ್ಕಾಗಿ ಆರೋ ಪಿಗಳನ್ನು ಮತ್ತೆ ತಮ್ಮ ಕಸ್ಟಡಿಗೆ ನೀಡು ವಂತೆ ಕೋರಿ ಜಿಲ್ಲಾ ಸೆಶನ್ಸ್ ನ್ಯಾಯಾ ಲಯಕ್ಕೆ ಅರ್ಜಿ ಸಲ್ಲಿಸಿರುವುದರ ಹಿನ್ನೆಲೆ ಯಾಗಿದೆ. ಈ ಕೊಲೆ ನಡೆಯುವ ದಿನದ ಮೊದಲು ಈ ಪ್ರಕರಣದ ಇಬ್ಬರು ಆರೋಪಿಗಳು ವಕೀಲರೋ ರ್ವರನ್ನು ನಿರಂತರವಾಗಿ ಫೋನ್ ಮೂಲಕ ಸಂಪರ್ಕಿಸಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಆ ಹಿನ್ನೆಲೆಯಲ್ಲಿ ಇಂದು ನಮ್ಮ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ನಿರ್ದೇಶಿಸಿ ತನಿಖಾ ತಂಡ ಆ ವಕೀಲ ರಿಗೆ ನೋಟೀಸು ಜ್ಯಾರಿಗೊಳಿಸಿದೆ.
ಮೂಲತಃ ಮಧೂರು ಸಮೀಪದ ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಹಾಗೂ ಈಗ ಬಾರಾ ಮೀತಲ್ ಮಾಂಙಾಡ್ ಬೈತುಲ್ ಫಾತಿಮಾದಲ್ಲಿ ವಾಸಿಸುತ್ತಿರುವ ಟಿ.ಎಂ. ಉಬೈಸ್(ಉಮೈಸ್-32), ಆತನ ಪತ್ನಿ ಮಂತ್ರವಾದಿನಿ ಕೆ.ಎಚ್. ಶಮೀನ (34), ಮಾಕ್ಕೂಟ್ ಜಿಲಾನಿ ನಗರದಲ್ಲಿ ವಾಸಿಸುತ್ತಿರುವ ಮೂಲತಃ ಪೂಚಕ್ಕಾಡ್ ನಿವಾಸಿ ಸಿ.ಎಂ. ಅಸ್ನಿಫ್ (36) iತ್ತು ಮಧೂರು ಕೊಲ್ಯದ ಆಯಿಶಾ (43) ಎಂಬವರು ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.