ಗಲ್ಫ್ ಉದ್ಯಮಿ ಕೊಲೆ : ಮಂತ್ರವಾದ ಹೆಸರಲ್ಲಿ ಲಪಟಾಯಿಸಿದ ಚಿನ್ನದ ಒಂದು ಭಾಗ ಕಾಸರಗೋಡಿನ ಜ್ಯುವೆಲ್ಲರಿಯಿಂದ ವಶ: ಉಳಿದ ಚಿನ್ನಕ್ಕಾಗಿ ಶೋಧ ಮುಂದುವರಿಕೆ
ಕಾಸರಗೋಡು: ಗಲ್ಫ್ ಉದ್ಯಮಿ ಬೇಕಲ ಸಮೀಪದ ಪೂಚಕ್ಕಾಡ್ ಫಾರೂಕಿ ಮಸೀದಿ ಸಮೀಪದ ಬೈತುಲ್ ಮಂಜಿಲ್ನ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (55)ಯನ್ನು ಮಂತ್ರವಾದದ ಹೆಸರಲ್ಲಿ 596 ಪವನ್ (4.76 ಕಿಲೋ) ಚಿನ್ನ ಪಡೆದು ಬಳಿಕ ಅವ ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬA ಧಿಸಿ ಆರೋಪಿಗಳು ಲಪಟಾಯಿಸಿದ ಚಿನ್ನದ ಪೈಕಿ 29 ಪವನ್ನ್ನು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂಬ್ರಾAಚ್ ಪೊಲೀಸರ ತಂಡ ನಿನ್ನೆ ಕಾಸರಗೋಡು ಹಳೆ ಬಸ್ ನಿಲ್ದಾಣ ಪರಿಸರದ ಜ್ಯುವೆಲ್ಲರಿಯೊಂದರಿAದ ವಶಪಡಿಸಿಕೊಂಡಿದೆ.
ಲಪಟಾಯಿಸಿದ ಚಿನ್ನವನ್ನು ಆರೋ ಪಿಗಳು ಕಾಸರಗೋಡಿನ ಹಲವು ಚಿನ್ನ ದಂಗಡಿಗಳಿಗೆ ಮಾರಾಟ ಮಾಡಿರು ವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದ್ದು, ಅದರಿಂದಾಗಿ ಅದನ್ನು ಪತ್ತೆಹಚ್ಚುವ ಕಾರ್ಯಾಚರಣೆ ಯನ್ನು ತನಿಖಾ ತಂಡ ಇನ್ನೂ ಮುಂದುವರಿಸಿದೆ. ಸೆರೆಗೊಳ ಗಾದ ಆರೋಪಿಗಳನ್ನು ಅವರು ಮಾರಾಟ ಮಾಡಿದ ಜ್ಯುವೆಲ್ಲರಿಗೆ ತನಿಖಾ ತಂಡ ನೇರವಾಗಿ ಕರೆತಂದು ಅವರ ಮೂಲ ಕವೇ ಅಲ್ಲಿಂದ ಚಿನ್ನ ವಶಪಡಿಸುವ ಕ್ರಮದಲ್ಲಿ ತೊಡಗಿದೆ. ಇದರಂತೆ ನಿನ್ನೆ ಆರೋಪಿಗಳನ್ನು ಜ್ಯುವೆಲ್ಲರಿಗೆ ಕರೆತಂದಿದ್ದರು. ಆಗ ಆ ಪರಿಸರದಲ್ಲಿ ಭಾರೀ ಜನಸಮೂಹ ನೆರೆದಿತ್ತು.
ಮೂಲತಃ ಮಧೂರು ಸಮೀಪದ ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಹಾಗೂ ಈಗ ಬಾರ ಮೀತಲ್ ಮಾಂuಟಿಜeಜಿiಟಿeಜಡ್ ಬೈತುಲ್ ಫಾತಿಮದಲ್ಲಿ ವಾಸಿಸುವ ಟಿ.ಎಂ. ಉಬೈಸ್ (ಉಮೈಸ್ 32), ಆತನ ಪತ್ನಿ ಮಂತ್ರವಾದಿನಿ ಕೆ.ಎಚ್. ಶಮೀನ (34), ಮುಕ್ಕೂಟ್ ಜಿಲಾನಿ ನಗರದಲ್ಲಿ ವಾಸಿಸುತ್ತಿರುವ ಮೂಲತಃ ಪೂಚಕ್ಕಾಡ್ ನಿವಾಸಿ ಪಿ.ಎಂ. ಅಸ್ನಿಫ್ (36) ಮತ್ತು ಮಧೂರು ಕೊಲ್ಯ ನಿವಾಸಿ ಆಯಿಶಾ (43) ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದು, ಅವರನ್ನು ಕ್ರೈಂ ಬ್ರಾಂಚ್ ನಿನ್ನೆ ಬಂಧಿಸಿದೆ.
2023 ಎಪ್ರಿಲ್ 14ರಂದು ಮುಂಜಾನೆ ಅಬ್ದುಲ್ ಗಫೂರ್ ಹಾಜಿ ಮನೆ ಬೆಡ್ರೂಂನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತ ಸಾವಿಗೆ ಕಾರಣವೆಂದು ಮೊದಲು ಅಂದಾಜಿಸಲಾಗಿತ್ತು. ಅದರ ಹಿಂದಿನ ದಿನ ಆ ಮನೆಯಲ್ಲಿ ಮಂತ್ರವಾದ ಚಿಕಿತ್ಸೆ ನಡೆಸಲಾಗಿತ್ತು. ಈ ಚಿಕಿತ್ಸೆ ವೇಳೆ ಮನೆಯಲ್ಲಿ ಯಾರೂ ಇರಬಾರದೆಂದು ಹೇಳಿ ಆರೋಪಿಗಳು ಗಫೂರ್ ಹಾಜಿಯ ಪತ್ನಿ ಹಾಗೂ ಮಕ್ಕಳನ್ನು ಮೇಲ್ಪರಂಬದಲ್ಲಿರುವ ಅವರ ತವರು ಮನೆಗೆ ಕಳುಹಿಸಿಕೊಟ್ಟಿದ್ದರು. ಮಂತ್ರವಾದ ಚಿಕಿತ್ಸೆಗೆ ನೀಡಲಾದ ಚಿನ್ನವನ್ನು ಗಫೂರ್ ಹಾಜಿ ಹಿಂತಿರುಗಿಸುವAತೆ ಆರೋಪಿಗಳಲ್ಲಿ ಕೇಳಿದ್ದರೆಂದೂ ಅದಕ್ಕಾಗಿ ಅವರ ತಲೆಯನ್ನು ಗೋಡೆಗೆ ಬಡಿದು ಕೊಲೆಗೈಯ್ಯಲಾಗಿತ್ತೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆAದು ಕ್ರೈಂಬ್ರಾAಚ್ ಪೊಲೀಸರು ತಿಳಿಸಿದ್ದಾರೆ. ಗಫೂರ್ ಹಾಜಿಯವರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಅವರ ಪುತ್ರ ಬಳಿಕ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ತನಿಖೆಯಂಗವಾಗಿ ದಫನಗೈಯ್ಯಲಾಗಿದ್ದ ಗಫೂರ್ ಹಾಜಿಯವರ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿತ್ತು. ತಲೆಗೆ ಉಂಟಾದ ಆಳದ ಗಾಯವೇ ಗಫೂರ್ ಹಾಜಿಯ ಸಾವಿಗೆ ಕಾರಣವೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಆ ಹಿನ್ನೆಲೆಯಲ್ಲಿ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಊರವರು ನಾಗರಿಕ ಕ್ರಿಯಾ ಸಮಿತಿ ರೂಪು ನೀಡಿ ಹೋರಾಟ ನಡೆಸಿದ್ದರು. ಅದರ ಫಲವಾಗಿ ಪ್ರಸ್ತುತ ಪ್ರಕರಣದ ತನಿಖೆಯನ್ನು ಸರಕಾರ ನಂತರ ಕ್ರೈಂಬ್ರಾAಚ್ಗೆ ಹಸ್ತಾಂತರಿಸಿತ್ತು. ಅದರಂತೆ ಕ್ರೈಂಬ್ರಾAಚ್ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಗುರುತಿಸಿ ಅವರನ್ನು ಬಂಧಿಸುವಲ್ಲಿ ಸಫಲವಾಗಿದೆ.