ಗಾಂಜಾ, ಮದ್ಯ ವಶ: ಮತ್ತೆ ಮೂವರ ಸೆರೆ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ವಿವಿಧೆಡೆಗಳ ಲ್ಲಾಗಿ ನಡೆಸಿದ ಮೂರು ಕಾರ್ಯಾ ಚರಣೆಗಳಲ್ಲಾಗಿ ಗಾಂಜಾ ಮತ್ತು ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಮೂವರನ್ನು ಬಂಧಿಸಲಾಗಿದೆ.
ಕುAಬಳೆಗೆ ಸಮೀಪದ ಕಿದೂರಿ ನಲ್ಲಿ ಕುಂಬಳೆ ರೇಂಜ್ನ ಎಕ್ಸೈಸ್ ಇನ್ಸ್ಪೆಕ್ಟರ್ ಮ್ಯಾಥ್ಯು ಕೆ.ಡಿ.ರ ನೇತೃತ್ವದ ತಂಡ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ 42 ಗ್ರಾಂ ಗಾಂಜಾ ಕೈವಶವಿರಿಸಿಕೊಂಡಿದ್ದ ಆರೋಪದಂತೆ ಕಿದೂರು ಅಂಬಿಲಡ್ಕ ಬಜಪೆ ನಿವಾಸಿ ಗಿರಿರಾಜ್ ಕೃಷ್ಣ ವಾಹ್ (45) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಮನಾಸ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಖಿಲೇಶ್ ಎಂ.ಎA ಮತ್ತು ಪ್ರಜಿತ್ ಪಿ. ಎಂಬಿವರು ಒಳಗೊಂಡಿದ್ದರು.
ಇನ್ನೊAದೆಡೆ ಚೆರ್ಕಳದಲ್ಲಿ ಕಾಸರಗೋಡು ರೇಂಜ್ ಎಕ್ಸೈಸ್ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಇನ್ಸ್ಪೆಕ್ಟರ್ (ಗ್ರೇಡ್) ಸಂತೋಷ್ ಕುಮಾರ್ ವಿ.ವಿ.ಯವರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 2.7 ಲೀಟರ್ ಕರ್ನಾಟಕ ನಿರ್ಮಿತ ಮದ್ಯದೊಂ ದಿಗೆ ಮಂಜಪ್ಪ ತಿಪ್ಪಣ ಸುನಗರ್ ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ನೀಲೇಶ್ವರ ತೆಕ್ಕೇಕಡಪ್ಪುರಂನಲ್ಲಿ ನೀಲೇಶ್ವರ ಅಬಕಾರಿ ರೇಂಜ್ನ ಎಕ್ಸೈಸ್ ಇನ್ಸ್ಪೆಕ್ಟರ್ ಎನ್. ವೈಶಾಖ್ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 20 ಗ್ರಾಂ ಗಾಂಜಾ ಕೈವಶವಿರಿಸಿಕೊಂಡಿದ್ದ ಓರ್ವನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ತೆಕ್ಕೇಕಡಪುರಂನ ಮೊಹಮ್ಮದ್ ಅಸರುದ್ದೀನ್ ಎ.ಪಿ (27) ಬಂಧಿತ ಆರೋಪಿಯಾಗಿದ್ದಾನೆ.