ಗಾಂಜಾ ವಶ: ಇಬ್ಬರ ವಿರುದ್ಧ ಕೇಸು
ಮಂಜೇಶ್ವರ: ಮಂಜೇಶ್ವರ ತಪಾಸಣಾ ಕೇಂದ್ರದ ಬಳಿ ಎಕ್ಸೈಸ್ ಇನ್ಸ್‌ಪೆಕ್ಟರ್ ಕೆ.ವಿ. ಗಂಗಾಧರನ್‌ರ ನೇತೃತ್ವದ ಅಬಕಾರಿ ತಂಡ ಹಾಗೂ ಕೆಮು ಯೂನಿಟ್ ಸಂಯು ಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾವೊಂದರಿಂದ 50 ಗ್ರಾಂ ಹಾಗೂ ಕೈವಶವಿದ್ದ 25 ಗ್ರಾಂನಂತೆ ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಮಂಜೇಶ್ವರ ರಹಮ್ಮತ್ ಮಜಾಲ್‌ನ ಅಬ್ದುಲ್ ರಹಿಮಾನ್ (48) ಹಾಗೂ ಕಡಂಬಾರ್‌ನ ಯೂಸುಫ್ (57) ಎಂಬವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಇಐ (ಗ್ರೇಡ್) ಗೋಪಿ, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ರಮೇಶನ್, ಸಿಇಒ ಪ್ರಜಿತ್, ಕೆಮು ತಂಡದ ಪ್ರಿವೆಂಟಿವ್ ಆಫೀಸರ್ ದಿನೇಶ್ ಕುಂಡತ್ತಿಲ್, ಸಿಇಒಗಳಾದ ಪ್ರಸನ್ನ ಕುಮಾರ್, ಪ್ರಶಾಂತ್ ಎಂಬವರು ಒಳಗೊಂಡಿದ್ದರು.