ಗಾಂಜಾ ವಶ: ಕಾರು ಸಹಿತ ಆರೋಪಿ ಸೆರೆ

ಕಾಸರಗೋಡು: ಗಾಂಜಾ ಸಹಿತ ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ದಿಲೀಪ್ ಎ.ಎಂ.ರ ನೇತೃತ್ವದ ತಂಡ ಓರ್ವನನ್ನು ಬಂಧಿಸಿದೆ.

ಹೊಸದುರ್ಗಕ್ಕೆ ಸಮೀಪದ ಕುಳಿಮಡಿಕೈ ಮನೋಜ್ ಥೋಮಸ್ ನಲ್ಲಂಕುಳ ವೀಟಿಲ್ ಎಂಬಾತ ಬಂಧಿತ ನಾದ ಆರೋಪಿ. 750 ಗ್ರಾಂ ಗಾಂಜಾ ವನ್ನು ಈತನಿಂದ ಪತ್ತೆಹಚ್ಚಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ವೆಳ್ಳರಿಕುಂಡ್ ಕಿನಾನೂರು ಚಾಯೋತ್ತ್‌ನಲ್ಲಿ ಅಬಕಾರಿ ತಂಡ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳ ಪಡಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸ ಲಾಗಿದೆ. ಆತ ಸಂಚರಿಸುತ್ತಿದ್ದ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ರಾಜೀ ವನ್ ಎಂ. ಸಿಸಿಒಗಳಾದ ಡಿಜಿತ್, ಸರಿತಾ, ಶೈಲೇಶ್ ಕುಮಾರ್, ಶಾಜಿ ಕೆ.ವಿ. ಎಂಬವರು ಒಳಗೊಂಡಿದ್ದಾರೆ.

RELATED NEWS

You cannot copy contents of this page