ಗಾಂಜಾ ಸಾಗಾಟ ಪ್ರಕರಣ: ಆರೋಪಿಗೆ 2 ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಬೈಕಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾ ಧೀಶರಾದ ಕೆ. ಪ್ರಿಯಾ ಅವರು ಎರಡು ವರ್ಷ ಕಠಿಣ ಸಜೆ ಮತ್ತು 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕುಂಜತ್ತೂರು ಪಾವೂರು ಶೀರ್ಕಟ್ಟೆ ನಿವಾಸಿ ರಾಜೇಶ್ ಅಲಿ ಯಾಸ್ ರಾಜು (42) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2020 ಡಿಸೆಂಬರ್ 10ರಂದು ಸಂಜೆ ಕುಂಜತ್ತೂರು ಶೀರ್ಕಟ್ಟೆಯಲ್ಲಿ ಅಂದು ಕುಂಬಳೆ ಎಕ್ಸೈಸ್ ಇನ್ಸ್‌ಪೆಕ್ಟರ್ ಆಗಿದ್ದ ಎನ್. ನೌಫಲ್ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಬೈಕ್‌ನಲ್ಲಿ ಸಾಗಿಸಲಾಗುತ್ತಿದ್ದ ಮೂರು ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದರು.
ಅದಕ್ಕೆ ಸಂಬಂಧಿಸಿ ರಾಜೇಶ್‌ನ ವಿರುದ್ಧ ಪ್ರಕರಣ ದಾಖಲಿ ಸಲಾಗಿತ್ತು. ಆ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಅಂದು ನಡೆದ ಅಬಕಾರಿ ಕಾರ್ಯಾ ಚರಣೆಯಲ್ಲಿ ಎಕ್ಸೈಸ್ ಪ್ರಿವೆಂಟೀವ್ ಆಫೀಸರ್‌ಗಳಾದ ರಾಜೀವನ್ ಪಿ, ಜಿಜಿತ್ ಕುಮಾರ್ ಕೆ, ನಸರುದ್ದೀನ್ ಎ.ಕೆ. ಮತ್ತು ಸತ್ಯನ್ ಇ.ಕೆ. ಎಂಬವರು ಒಳಗೊಂಡಿದ್ದರು. ಪ್ರಕರಣದ ಬಗ್ಗೆ ಅಂದು ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಜೋಯ್ ಜೋಸೆಫ್ ತನಿಖೆ ನಡೆಸಿ ನ್ಯಾಯಾಲ ಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ. ಚಂದ್ರಮೋಹನನ್ ಮತ್ತು ನ್ಯಾ. ಚಿತ್ರಕಲ ವಾದಿಸಿದ್ದರು.