ಗೂಡಂಗಡಿ ಕಳವಿಗೆ ಯತ್ನ

ಕುಂಬಳೆ: ಭಾಸ್ಕರನಗರದಲ್ಲಿ ಗೂಡಂಗಡಿಯೊಂದರಿಂದ ಕಳವು ನಡೆಸಲು ಕಳ್ಳರು ಯತ್ನಿಸಿ ವಿಫಲರಾಗಿದ್ದಾರೆ. ಭಾಸ್ಕರನಗರ ನಿವಾಸಿಯೂ ಅಲ್ಲೇ ಗೂಡಂಗಡಿ ನಡೆಸುವ ವಿಕಲಚೇತನ ಹರೀಶ್ ಎಂಬವರ ಗೂಡಂಗಡಿಯಿಂದ ನಿನ್ನೆ ರಾತ್ರಿ ಕಳವಿಗೆ ಯತ್ನ ನಡೆದಿದ್ದು ಇಂದು ಬೆಳಿಗ್ಗೆ  ಅರಿವಿಗೆ   ಬಂದಿದೆ. ಕಬ್ಬಿಣದ ಸರಳು ಬಳಸಿ ಗೂಡಂಗ ಡಿಯ ಬಾಗಿಲು ಮುರಿಯಲು ಯತ್ನ ನಡೆದಿದೆ.  ಕುಂಬಳೆ-ಬದಿಯಡ್ಕ ರಸ್ತೆಯ ಬದಿಯಲ್ಲೇ ಗೂಡಂಗಡಿಯಿದ್ದು, ಅದರ ಸಮೀಪದಲ್ಲಿ ಪಂಚಾಯತ್‌ನ ಮಿನಿಮಾಸ್ಟ್ ಲೈಟ್ ಹಾಗೂ ಕೆಎಸ್‌ಟಿಪಿ ರಸ್ತೆಯ ಒಂದು ಬೀದಿ ದೀಪವೂ ಬೆಳಗುತ್ತಿದೆ. ಅಲ್ಲದೆ ಜನಸಂಚಾರವುಳ್ಳ ಈ ಪ್ರದೇಶದಲ್ಲಿ ಕಳ್ಳರು  ಈ ಕೃತ್ಯ ನಡೆಸಿದ್ದಾರೆ. ಘಟನೆ ಬಗ್ಗೆ ಹರೀಶ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page