ಗೂಡಂಗಡಿ ವ್ಯಾಪಾರಿ, ಮಗನಿಗೆ ತಂಡದಿಂದ ಹಲ್ಲೆ

ಕುಂಬಳೆ: ಗೂಡಂಗಡಿ ವ್ಯಾಪಾರಿ ಹಾಗೂ ಅವರ ಮಗನಿಗೆ ತಂಡ ವೊಂದು ಹಲ್ಲೆ ನಡೆಸಿದ ಬಗ್ಗೆ ದೂರಲಾಗಿದೆ.

ಬಂಬ್ರಾಣ ಅಂಡಿತ್ತಡ್ಕದ ರಮೇಶ್ 48). ಪುತ್ರ ರಜಿತ್  (18)  ಹಲ್ಲೆಯಿಂದ ಗಾಯಗೊಂ ಡಿದ್ದಾರೆ. ಈ ಸಂಬಂಧ ಬಂಬ್ರಾಣ  ಬತ್ತೇರಿ ನಿವಾಸಿ ಸಹೋದರರಾದ ಹರೀಶ್, ಯೋಗೀಶ್, ಸತೀಶ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.  ಬಂಬ್ರಾಣ ಅಂಡಿತ್ತಡ್ಕದಲ್ಲಿ ನಿನ್ನೆ  ಹಗಲು ಕಬಡ್ಡಿ ಪಂದ್ಯಾಟ ನಡೆದಿತ್ತು. ಈ ವೇಳೆ ಅಲ್ಲಿ ಗೂಡಂಗಡಿ ನಡೆಸುತ್ತಿದ್ದ ರಮೇಶ್ ಬಳಿಗೆ ತಲುಪಿದ ತಂಡ ವಿನಾ ಕಾರಣ ವಾಗ್ವಾದ ನಡೆಸಿ ಹಲ್ಲೆ ಗೈದಿದೆ. ಅದನ್ನು ತಡೆಯಲೆತ್ನಿಸಿದ ರಮೇಶ್‌ರ ಪುತ್ರ ರಜಿತ್‌ಗೂ ತಂಡ ಹಲ್ಲೆಗೈದಿದೆಯೆಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ರಮೇಶ್, ರಜಿತ್ ಕುಂಬಳೆ ಸಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

You cannot copy contents of this page