ಗೃಹಿಣಿಯನ್ನು ಕುತ್ತಿಗೆ ಬಿಗಿದು ಕೊಲೆಗೈದ ಪ್ರಕರಣ: ಆರೋಪಿ ಪತಿ ತಪ್ಪಿತಸ್ಥ
ಕಾಸರಗೋಡು: ಗೃಹಿಣಿಯನ್ನು ಹಾಡಹಗಲೇ ಮನೆಯೊಳಗೆ ಕುತ್ತಿಗೆಗೆ ಶಾಲು ಬಿಗಿದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಪತಿ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ.
ಪೆರ್ಲ ಕೆ.ಕೆ. ರೋಡ್‌ನಲ್ಲಿ ಅಜಿಲಡ್ಕ ಎಂಬಲ್ಲಿನ ಜನಾರ್ದನ (50) ಎಂಬಾತ ತಪ್ಪಿತಸ್ಥನೆಂದು ತಿಳಿಸಲಾಗಿದೆ. ಕಾಸರಗೋಡು ಜಿಲ್ಲಾ ಅಡಿಶನಲ್ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶ ಎ. ಮನೋಜ್ ಅವರು ಈ ತೀರ್ಪು ನೀಡಿ ದ್ದಾರೆ. ಆರೋಪಿಗೆ ಶಿಕ್ಷೆಯನ್ನು ಜೂನ್ 21ರಂದು ಘೋಷಿಸಲಾಗುವುದು. ಆರೋಪಿ ಜನಾರ್ದನ ಪತ್ನಿ ಸುಶೀಲ (45)ರನ್ನು ಕುತ್ತಿಗೆಗೆ ಶಾಲು ಬಿಗಿದು ಕೊಲೆಗೈದ ಬಗ್ಗೆ ಪ್ರಕರಣ ದಾಖಲಿ ಲಾಗಿತ್ತು. 2020 ಸೆಪ್ಟಂಬರ್ 7ರಂದು ಈ ಕೊಲೆ ಪ್ರಕರಣ ನಡೆದಿತ್ತು. ಅಂದು ಸಂಜೆ ಸುಶೀಲ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸುಶೀಲರ ಬೊಬ್ಬೆ ಕೇಳಿ ನೆರೆಮನೆ ನಿವಾಸಿಗಳು ಅಲ್ಲಿಗೆ ತಲುಪಿದ್ದರು.
ಈ ವೇಳೆ ಸುಶೀಲ ಅರೆಪ್ರಜ್ಞಾವಸ್ಥೆಯಲ್ಲಿದ್ದರೆ ನ್ನಲಾಗಿದೆ. ಕೂಡಲೇ ತಲುಪಿದ ಪೊಲೀಸರು ಹಾಗೂ ನಾಗರಿಕರು ಆಸ್ಪತ್ರೆಗೆ ಕಂಡೊಯ್ಯಲು ಪ್ರಯತ್ನಿಸುತ್ತಿದ್ದಂತೆ ಸುಶೀಲ ಮೃತಪಟ್ಟಿದ್ದರು. ಬಳಿಕ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಗೆ ಶಾಲು ಬಿಗಿದ ಪರಿಣಾಮ ಸುಶೀಲ ಸಾವಿಗೀಡಾಗಿರುವುದಾಗಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪತಿ ಜನಾರ್ದನನನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ಗೊಳಪಡಿಸಿದಾಗ ಆತ ತಪ್ಪೊ ಪ್ಪಿಕೊಂಡಿದ್ದನು. ಇದರಿಂದ ಆತನನ್ನು ಪೊಲೀಸರು ಬಂಧಿಸಿದ್ದರು.