ಗೋಸಾಡ ಕ್ಷೇತ್ರದಲ್ಲಿ ಮಾತೃ ಮಂಡಳಿ ಸಭೆ

ಕುಂಬ್ಡಾಜೆ : ಗೋಸಾಡ ಶ್ರೀ ಮಹಿಷ ಮರ್ದಿನೀ ಕ್ಷೇತ್ರದ ಮಾತೃ ಮಂಡಳಿ ಸಭೆ ಕ್ಷೇತ್ರದಲ್ಲಿ ಜರಗಿತು. ಫೆಬ್ರವರಿ 12ರಂದು ಜರಗುವ ಪುನಃ ಪ್ರತಿಷ್ಠ ದಿನ ಮಹೋತ್ಸವ ಸಹಸ್ರ ಕದಳಿ ಯಾಗ ಮತ್ತು ಅಥರ್ವಶೀರ್ಷ ಗಣಪತಿಯಾಗ ಜರಗಲಿರುವ ಕಾರಣ ಮಾತೃ ಮಂಡಳಿಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾತೃ ಮಂಡಳಿಯ ಗೌರವ ಅಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ ಕರೆ ನೀಡಿದರು. ಮಾತೃ ಮಂಡಳಿಯ ಅಧ್ಯಕ್ಷÉ ಲಲಿತ ಗೋಸಾಡ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ನಳಿನಿ ಪರಪ್ಪೆ ಸ್ವಾಗತಿಸಿ, ಕೋಶಾಧಿಕಾರಿ ಜಯಂತಿ ಗೋಸಾಡ ವಂದಿಸಿದರು

RELATED NEWS

You cannot copy contents of this page