ಗ್ಯಾಸ್ ಸೋರಿಕೆ: ಆತಂಕ ದೂರ ಮಾಡಿದ ಅಗ್ನಿಶಾಮಕ ದಳ
ಉಪ್ಪಳ: ಮಣ್ಣಂಗುಳಿ ಮೈದಾನ ಬಳಿಯ ಫ್ಲ್ಯಾಟ್ವೊಂದರಲ್ಲಿ ಅಡುಗೆ ಅನಿಲ ಸೋರಿಕೆ ಉಂಟಾಗಿ ಆತಂಕ ವಾತಾವರಣ ನಿನ್ನೆ ರಾತ್ರಿ ಉಂಟಾಗಿತ್ತು. ಫ್ಲ್ಯಾಟ್ನ ನಜ್ಮುನ್ನೀಸಾ ಎಂಬವರ ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಸೋರಿಕೆಯಾಗಿದ್ದು, ಕೂಡಲೇ ಅಗ್ನಿಶಾಮಕ ದಳದವರು ತಲುಪಿ ಸಿಲಿಂಡರನ್ನು ಮಣ್ಣಂಗುಳಿ ಮೈದಾನಕ್ಕೆ ತೆಗೆದುಕೊಂಡು ಹೋಗಿ ಅದರ ಗ್ಯಾಸ್ ಖಾಲಿ ಮಾಡಿದ್ದಾರೆ. ಅನಿಲ ಜಾಡಿಯ ರೆಗ್ಯುಲೇಟರ್ ಹಾನಿಯಾಗಿರುವುದೇ ಸೋರಿಕೆಗೆ ಕಾರಣವೆಂದು ಶಂಕಿಸಲಾಗಿದೆ.