ಚರಂಡಿಯ ಸ್ಲ್ಯಾಬ್ ಕುಸಿತ: ಮಗುಚಿ ಬಿದ್ದ ಲಾರಿ ; ಚಾಲಕನಿಗೆ ಗಂಭೀರ

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಚರಂಡಿಯ ಸ್ಲ್ಯಾಬ್‌ಗೆ ಹತ್ತಿದ ಲಾರಿ ಮಗುಚಿಬಿದ್ದಿದೆ. ಚಾಲಕ  ನಾಯ್ಕಾಪು ನಿವಾಸಿ ಮಧು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಶನಿವಾರ ಸಂಜೆ ೫ ಗಂಟೆ ವೇಳೆ ಕುಂಬಳೆ ಪೇಟೆ ಸಮೀಪದ ಬದಿಯಡ್ಕ ರಸ್ತೆಯಲ್ಲಿ ಅಪಘಾತವುಂಟಾಗಿದೆ.  ಲೋಡ್ ಹೇರಿಬಂದ ಲಾರಿ ಸ್ಲ್ಯಾಬ್‌ಗೆ ಹತ್ತಿದಾಗ ಸ್ಲ್ಯಾಬ್ ಕುಸಿದಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಘಟನೆ ತಿಳಿದು ತಲುಪಿದ ನಾಗರಿಕರು ಹಾಗೂ ಪೊಲೀಸರು ಸೇರಿ ವಾಹನದೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆದು  ಆಸ್ಪತ್ರೆಗೆ ತಲುಪಿಸಿದ್ದಾರೆ.  ನಾಲ್ಕು ತಿಂಗಳ ಹಿಂದೆಯೂ ಇಲ್ಲಿ ಚರಂಡಿಯ ಸ್ಲ್ಯಾಬ್ ಕುಸಿದು ಲಾರಿ ಮಗು ಚಿಬಿದ್ದಿತ್ತು. ಅವೈಜ್ಞಾನಿಕ ರೀತಿಯಲ್ಲಿ  ಸ್ಲ್ಯಾಬ್ ನಿರ್ಮಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page