ಚರ್ಚ್, ಭಜನಾಮಂದಿರ ಕಳವು: ತನಿಖೆ ತೀವ್ರ

ಮಂಜೇಶ್ವರ: ವರ್ಕಾಡಿಯ ಚರ್ಚ್ ಹಾಗೂ ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಕಾಣಿಕೆ ಹುಂಡಿ ಕಳವು ನಡೆಸಿದ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆಯ ಅಂಗವಾಗಿ ವರ್ಕಾಡಿ ಚರ್ಚ್ ಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಕೆಲವು ಬೆರಳಚ್ಚು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಸೋಮವಾರ ಮುಂಜಾನೆ ವೇಳೆ ಚರ್ಚ್ ಹಾಗೂ ಭಜನಾ ಮಂದಿರದಲ್ಲಿ ಕಳವು ನಡೆದಿತ್ತು. ಚರ್ಚ್ ಬಳಿಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಹೆಲ್ಮೆಟ್ ಧರಿಸಿದ ವ್ಯಕ್ತಿಯೋರ್ವ ದ್ವಿಚಕ್ರ ವಾಹನದಲ್ಲಿ ತಲುಪಿ ಕಾಣಿಕೆ ಹುಂಡಿ ಕಳವುಗೈದಿರುವುದು ಕಂಡು ಬಂದಿದೆ.

RELATED NEWS

You cannot copy contents of this page