ಚಿಕಿತ್ಸೆಯಲ್ಲಿದ್ದ ಯುವಕ ನಿಧನ
ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಎರ್ನಾಕುಳಂನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ತಳಂಗರೆ ಜದೀದ್ ರಸ್ತೆ ನಿವಾಸಿ ಹಾಗೂ ದುಬೈಯಲ್ಲಿ ಬ್ಯಾಂಕ್ ಉದ್ಯೋಗಿಯಾ ಗಿರುವ ಪಿ.ಎ. ಮುಜೀಬ್ ರಹ್ಮಾನ್‌ರ ಪುತ್ರ ಮುನೀಬ್ ಮುಜೀಬ್ (23) ಮೃತಪಟ್ಟವರು. ನಿನ್ನೆ ಮುಂಜಾನೆ ನಿಧನ ಸಂಭವಿಸಿದೆ. ಕಳೆದ ಕೆಲವು ತಿಂಗಳು ಗಳಿಂದ ಚಿಕಿತ್ಸೆಯಲ್ಲಿದ್ದರು. ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರನಾಗಿ ದ್ದಾರೆ. ಮೃತರು ತಂದೆ, ತಾಯಿ ಮಾಶಿತಾ, ಸಹೋದರ- ಸಹೋದರಿಯರಾದ ಡಾ. ಮುಬಶಿರ, ಮುಬೈನ, ಮುಹ್‌ಶಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.