ಚಿನ್ನದ ಬೆಲೆ ಮತ್ತೆ ದಾಖಲೆಯತ್ತ
ಕಾಸರಗೋಡು: ಚಿನ್ನದ ಬೆಲೆಯಲ್ಲಿ ಮತ್ತೆ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ. ಇಂದು ೧ ಗ್ರಾಂ ಚಿನ್ನಕ್ಕೆ ೬೦ ರೂ.ಗಳ ಹೆಚ್ಚಳವಾಗಿ ೫,೭೪೦ರೂ.ಗೇರಿದೆ. ಅದೇ ರೀತಿ ಪವನ್‌ಗೆ ೪೮೦ ರೂ.ಗಳ ಏರಿಕೆಯಾಗಿ ೪೫,೯೨೦ ರೂ.ಗೇರಿದೆ. ಈ ಹಿಂದೆ ೨೦೨೩ ಮೇ ೫ರಂದು ಚಿನ್ನದ ಬೆಲೆ ಅತೀ ಹೆಚ್ಚಾಗಿ ದಾಖಲೆ ಸೃಷ್ಟಿಸಿತ್ತು. ಅಂದು ೧ ಪವನ್ ಚಿನ್ನದ ಬೆಲೆ ೪೫,೭೪೦ ರೂ. ಆಗಿತ್ತು. ಇಸ್ರೇಲ್-ಹಮಾಸ್ ಮಧ್ಯೆ ನಡೆಯುತ್ತಿರುವ ಯುದ್ಧವೇ ಚಿನ್ನದ ಬೆಲೆಯಲ್ಲಿ ಏರಿಕೆ ಯುಂಟಾಗಲು ಪ್ರಧಾನ ಕಾರಣ ಗಿದೆಯೆಂದು ಹೇಳಲಾಗುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಶೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿಯುತ್ತಿದೆ. ಇದರಿಂದ ಠೇವಣಿದಾರರು ಹೆಚ್ಚು ಸುರಕ್ಷಿತ ಠೇವಣಿಯಾಗಿ ಚಿನ್ನವನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಯುದ್ಧ ಇನ್ನೂ ಮುಂದುವರಿದರೆ ಚಿನ್ನದ ಬೆಲೆಯಲ್ಲಿ ಏರಿಕೆಯುಂಟಾಗಲು ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.