ಚಿನ್ನವೆಂದು ನಂಬಿಸಿ ಲೋಹದ ಗಟ್ಟಿ ನೀಡಿ ವ್ಯಾಪಾರಿಗೆ ವಂಚನೆ: ಅಸ್ಸಾಂ ನಿವಾಸಿಗಳಾದ ಇಬ್ಬರು ಸೆರೆ

ಕಲ್ಲಿಕೋಟೆ: ನಕಲಿ ಚಿನ್ನದ ಗಟ್ಟಿ ಯನ್ನು ನೀಡಿ ಚಿನ್ನ ವ್ಯಾಪಾರಿಯನ್ನು ವಂಚಿಸಿದ ಅಸ್ಸಾಂ ನಿವಾಸಿಗಳಿಬ್ಬರು ಕಲ್ಲಿಕೋಟೆಯಲ್ಲಿ ಸೆರೆಯಾಗಿದ್ದಾರೆ. ಇಜಾಜುಲ್ ಇಸ್ಲಾಂ, ರೈಸುದ್ದೀನ್ ಎಂಬಿ ವರನ್ನು ನಡಕ್ಕಾವ್ ಪೊಲೀಸರು ಸೆರೆ ಹಿಡಿದಿದ್ದಾರೆ. ಈ ತಂಡದ ಇನ್ನೋರ್ವ ಸೆರೆಗೀಡಾಗಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಪ್ಪುರಂ ನಿವಾಸಿಯಾದ ವ್ಯಾಪಾರಿಯನ್ನು ತಂಡ ಕಬಳಿಸಿದೆ. ಕೊಂಡೋಟಿಯಲ್ಲಿ ವ್ಯಾಪಾರಿಯಾಗಿ ರುವ ವ್ಯಕ್ತಿಯಿಂದ 6 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಇವರು ಸೆರೆಯಾಗಿರುವುದು. 12 ಲಕ್ಷ ರೂ.ವನ್ನು ಚಿನ್ನದ ಗಟ್ಟಿಗೆ ನಿಗದಿಪಡಿಸಲಾಗಿತ್ತು. ಮೊದಲ ಹಂತದಲ್ಲಿ 6 ಲಕ್ಷ ರೂ. ಸ್ವೀಕರಿಸಿದ ಬಳಿಕ ಆರೋಪಿಗಳು ತಲೆಮರೆಸಿ ಕೊಂಡಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ ಇವರನ್ನು ಸೆರೆ ಹಿಡಿಯಲಾಗಿದೆ. 2024 ಜನವರಿ 18ರಂದು ಘಟನೆ ನಡೆದಿತ್ತು. ಚಿನ್ನದ ಗಟ್ಟಿ ಎಂಬ ಹೆಸರಲ್ಲಿ ಅರ್ಧ ಕಿಲೋಗ್ರಾಂನಷ್ಟು ತೂಕದ ಲೋಹವನ್ನು ತೋರಿಸಿ ತಂಡ ವಂಚನೆ ನಡೆಸಿತ್ತು.

6 ಲಕ್ಷ ರೂ. ಪಡೆದು ತಂಡ ಪರಾರಿಯಾದ ಬಳಿಕ ಚಿನ್ನದ ಗಟ್ಟಿಯನ್ನು ಪರಿಶೀಲಿಸಿದಾಗ ಅದು ಲೋಹದ ಗಟ್ಟಿ ಎಂದು ತಿಳಿದು ಬಂದಿದ್ದು, ವಂಚನೆಗೊಳಗಾದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಮೊಬೈಲ್ ಫೋನ್, ಟವರ್ ಲೊಕೇಶನ್‌ಗಳ ಆಧಾರದಲ್ಲಿ ಹುಡುಕಾಟ ನಡೆಸಲಾಗುತ್ತಿತ್ತು. ಆದರೆ ಫೋನ್ ಹಾಗೂ ಸಿಮ್ ಕಾರ್ಡ್‌ಗಳನ್ನು ಅಪರಾಧಿಗಳು ಆಗಾಗ ಬದಲಿಸುತ್ತಿದ್ದರು. ಇದೇ ತಂಡ ಇನ್ನೊಂದು ವಂಚನೆಗಾಗಿ ತೃಶೂರ್‌ಗೆ ತಲುಪಿದಾಗ ನಡಕ್ಕಾವ್ ಪೊಲೀಸರು ಇವರನ್ನು ಸೆರೆ ಹಿಡಿದಿದ್ದಾರೆ.

You cannot copy contents of this page