ಚೀನಾ ಯತ್ನಕ್ಕೆ ಹಿನ್ನಡೆ: ಭಾರತಕ್ಕೆ ರಾಜತಾಂತ್ರಿಕ ಗೆಲುವು; ಮಾಲ್ಡೀವ್ಸ್‌ನ 28 ದ್ವೀಪಗಳು ಭಾರತಕ್ಕೆ

ಹೊಸದಿಲ್ಲಿ: ದ್ವೀಪರಾಷ್ಟ್ರವಾದ ಮಾಲ್ಡೀವ್ಸ್ ತನ್ನ 28 ದ್ವೀಪಗಳ ಅಭಿ ವೃದ್ಧಿಗಾಗಿ ಅವುಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ದೊಡ್ಡ ಮಟ್ಟದ ರಾಜತಾಂ ತ್ರಿಕ ಗೆಲುವು ಉಂಟಾಗಿದೆ. ಇನ್ನೊಂದೆಡೆ ಇದು ಭಾರತದ ವಿರುದ್ಧ ಮಾಲ್ಡೀವ್ಸ್‌ನ್ನು ಎತ್ತಿ ಕಟ್ಟುವ ಚೀನದ ಕುತಂತ್ರಕ್ಕೂ ಭಾರೀ ಹಿನ್ನಡೆ ಉಂಟಾಗಿದೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಲ್ಡೀವ್ಸ್‌ಗೆ ಬೇಟಿ ನೀಡಿ ಅಲ್ಲಿನ ಅಧ್ಯಕ್ಷ ಮುಹಮ್ಮದ್ ಮುಯಿಝ ಅವರೊಂದಿಗೆ ಚರ್ಚೆಯಲ್ಲಿ ಮಾಲ್ಡೀವ್ಸ್‌ನ ೨೮ ದ್ವೀಪಗಳನ್ನು ಅಭಿವೃದ್ಧಿಗಾಗಿ ಭಾರತಕ್ಕೆ ಬಿಟ್ಟುಕೊಡುವ ಈ ಮಹತ್ತರ ತೀರ್ಮಾನ ಕೈಗೊಳ್ಳ ಲಾಗಿದೆ.

ಮಾಲ್ಡೀವ್ಸ್‌ನ್ನು ನೇರವಾಗಿ ತನ್ನ ಹಿಡಿತಕ್ಕೆ ಒಳಪಡಿಸುವ ತೀವ್ರ ಯತ್ನದಲ್ಲಿ ಚೀನ ವರ್ಷಗಳಿಂದಲೇ ತೊಡಗಿತ್ತು. ಅದರಂತೆ ಚೀನದ ಒತ್ತಡಕ್ಕೆ ಮಣಿದು ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನೆಯನ್ನು ಹಿಂಪಡೆಯುವಂತೆ ಮಾಲ್ಡೀವ್ಸ್ ಭಾರತಕ್ಕೆ ಇತ್ತೀಚೆಗೆ ನಿರ್ದೇಶ ನೀಡಿತ್ತು. ಅದರಂತೆ ಭಾರತ ಹಂತಹಂತವಾಗಿ ತನ್ನ ಸೇನಾ ತುಕುಡಿ ಯನ್ನು ಹಿಂತೆಗೆದುಕೊಂಡಿತ್ತು. ಅಂದಿ ನಿಂದ ಮಾಲ್ಡೀವ್ಸ್‌ಗೆ ಕಂಟಕವೂ ಆರಂಭ ಗೊಂಡಿತ್ತು. ಕೇವಲ ಪ್ರವಾಸೋಧ್ಯಮದ ಆದಾಯವನ್ನು ಮಾತ್ರವೇ ಆಶ್ರಯಿ ಸುತ್ತಿರುವ ಮಾಲ್ಡೀವ್ಸ್‌ಗೆ ಅಂದಿನಿಂದ ಭಾರತೀಯ ಪ್ರವಾಸಿಗಳು ಮಾಲ್ಡೀವ್ಸ್ ಸಂದರ್ಶನವನ್ನೇ ತೊರೆದಿದ್ದರು. ಮಾಲ್ಡೀವ್ಸ್‌ನ ಪ್ರವಾಸೋಧ್ಯಮಕ್ಕೆ ಬಹುಪಾಲು ಕೊಡುಗೆ ನೀಡುತ್ತಿರು ವವರು ಭಾರತೀಯರೇ  ಆಗಿದ್ದರು. ಇದು ಮಾಲ್ಡೀವ್ಸ್‌ನ್ನು ಆರ್ಥಿಕವಾಗಿ ತೀವ್ರ ಕಂಗಾಲುಗೊಳಿಸುವಂತೆ ಮಾಡ ತೊಡಗಿತು. ಅದರಿಂದ ಪಾಠ ಕಲಿತು ತನ್ನ ತಪ್ಪನ್ನು ಕೊನೆಗೂ ಅರಿತುಕೊಂಡ ಮಾಲ್ಡೀವ್ಸ್ ಕೊನೆಗೆ ಅದರಿಂದ ಹೊರ ಬರಲು ಭಾರತದೊಂದಿಗಿನ ರಾಜ ತಾಂತ್ರಿಕ ಸಂಬಂಧವನ್ನು ಮತ್ತೆ ಸುದೃಢಗೊಳಿಸಲು ಮುಂದಾಯಿತು. ಅದರ ಫಲವಾಗಿ ಆ ದೇಶದ ೨೮ ದ್ವೀಪಗಳ ಅಭಿವೃದ್ಧಿಗಾಗಿ ಅವುಗಳನ್ನು ಭಾರತಕ್ಕೆ ಬಿಟ್ಟುಕೊಡುವ ಮಹತ್ತರ ತೀರ್ಮಾನ ಈಗ ಕೈಗೊಂಡಿದೆ.

ಮಾಲ್ಡೀವ್ಸ್ ಅಧ್ಯಕ್ಷ  ಮುಹಮ್ಮದ್ ಮುಯಿಝ ಭಾರತದ ನಿರಂತರ ನೆರವನ್ನು ಈಗ  ಶ್ಲಾಘಿಸತೊಡಗಿದ್ದಾರೆ. ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಅಳಗೊಳಿಸುವ ಬದ್ಧತೆಯನ್ನೂ ಅವರು ಪುನರುಚ್ಚರಿಸಿದ್ದಾರೆ. ತಮ್ಮ ದೇಶದ ಸಾಮಾಜಿಕ, ಮೂಲ ಸೌಕರ್ಯ ಮತ್ತು ಹಣಕಾಸು ಸೇರಿದಂತೆ ಒಟ್ಟಾರೆ  ಅಭಿವೃದ್ಧಿಗೆ ಭಾರತದ ಬೆಂಬಲವನ್ನೂ ಕೋರಿದ್ದಾರೆ.

ಜುಲೈ 23ರಂದು ಮಂಡಿಸಲಾದ ಕೇಂದ್ರ ಬಜೆಟ್ 2024ಕ್ಕೆ ಹೋಲಿಸಿದ್ದಲ್ಲಿ, 2024-25ರ ಆರ್ಥಿಕ ವರ್ಷದಲ್ಲಿ ಮಾಲ್ಡೀವ್ಸ್‌ಗೆ ನೀಡಲಾಗುವ ಸಹಾಯವನ್ನು ಶೇ. 48ರಷ್ಟು ಗಮನಾರ್ಹ ಕಡಿತಮಾಡಲಾಗಿತ್ತು. ಇದು ಮಾಲ್ಡೀವ್ಸ್‌ಗೆ ಇನ್ನೊಂದು ಭಾರೀ ಆರ್ಥಿಕ ಹೊಡೆತವನ್ನೂ ನೀಡಿದೆ. ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ಬೇಟಿ ನೀಡಿದಾಗ ಅದು ಮಾಲ್ಡೀವ್ಸ್‌ನ್ನು ಇನ್ನಷ್ಟು ಸಂಕಷ್ಟಕ್ಕೆ  ಬೀಳುವಂತೆ ಮಾಡಿತ್ತು. ಅಂದಿನಿಂದ ಮಾಲ್ಡೀವ್ಸ್‌ಗೆ ಭಾರತೀಯ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಯಿತು. ಆದರೆ ಇದೀಗ ಪರಿಸ್ಥಿತಿ ಬಡಲಾಗಿದೆ. ಆದ್ದರಿಂದ ಭಾರತದೊಂದಿಗೆ ಶಂತಿ ಸ್ಥಾಪನೆಗೆ ಮಾಲ್ಡೀವ್ಸ್ ಈಗ ಸಿದ್ಧವಾಗಿದೆ.

Leave a Reply

Your email address will not be published. Required fields are marked *

You cannot copy content of this page