ಹೊಸಂಗಡಿ: ವಾಮಂ ಜೂರುನಲ್ಲಿರುವ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ವಾರೀ ಸುದಾರರಿಲ್ಲದ 3.75ಲೀಟರ್ ಕರ್ನಾಟಕ ಮದ್ಯವನ್ನು ವಶಪಡಿಸಲಾಗಿದೆ.
ನಿನ್ನೆ ಸಂಜೆ 5.40ರ ವೇಳೆ ಇನ್ಸ್ಫೆಕ್ಟರ್ ಗಂಗಾಧರನ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಮಂಗಳೂರಿನಿAದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೇರಳ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಹಿಂಬದಿ ಸೀಟ್‌ನ ಅಡಿಭಾಗದಲ್ಲಿ ಚೀಲದಲ್ಲಿ ವಾರೀಸುದಾರರಿಲ್ಲದ ಸ್ಥಿತಿಯಲ್ಲಿ ಮದ್ಯ ಪತ್ತೆಯಾಗಿದೆ. ಬಾಟಲಿ ಹಾಗೂ ಪ್ಯಾಕೇಟ್ ಮದ್ಯ ಒಳಗೊಂಡಿದೆ. ಪ್ರಿವೆಂಟಿವ್ ಆಫೀಸರುಗಳಾದ ಮೊಯಿದೀನ್ ಸಾಧಿಕ್, ವಿಜಯನ್, ರಾಹುಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
