ಛಾಪಾ ಕಾಗದ ಕ್ಷಾಮ: ತನಿಖೆಗೆ ಮರ್ಚೆಂಟ್ಸ್ ಅಸೋಸಿಯೇಶನ್ ಮನವಿ

ಕಾಸರಗೋಡು: ವಿವಿಧ ಅಗತ್ಯ ಗಳಿಗೆ ಛಾಪಾ ಕಾಗದಗಳಿಗಾಗಿ ಕಾಸರಗೋಡು ನಗರಕ್ಕೆ ತಲುಪುವವರು ಸುತ್ತಾಟ ನಡೆಸಬೇಕಾದ ಅವಸ್ಥೆ ಇದೆ ಎಂದು ಮರ್ಚೆಂಟ್ಸ್ ಅಸೋಸಿಯೇ ಶನ್ ಆರೋಪಿಸಿದೆ. ಛಾಪಾ  ಕಾಗದಕ್ಕೆ ಬೇಕಾಗಿ ಕಾಸರಗೋಡು ನಗರದಿಂದ  ೪ ಕಿಲೋ ಮೀಟರ್ ದೂರದ ವಿದ್ಯಾನಗರದಲ್ಲಿರುವ ಕಲೆಕ್ಟರೇಟ್ ಸಮುಚ್ಚಯಕ್ಕೆ ತೆರಳಬೇಕಾಗುತ್ತಿದೆ. ಇ-ಸ್ಟಾಂಪ್ ಜ್ಯಾರಿಗೊಳ್ಳುವುದಾಗಿ ತಿಳಿಸಿದ್ದರೂ ಅದನ್ನು ಇದುವರೆಗೂ ಲಭ್ಯಗೊಳಿಸಲು ಸರಕಾರ ಮುಂದಾಗಲಿಲ್ಲ.

ಪ್ರಸ್ತುತ ಛಾಪಾ ಕಾಗದ ಕ್ಷಾಮವನ್ನು ಸ್ಟಾಂಪ್ ವೆಂಡರ್‌ಗಳು ಮನಃಪೂರ್ವಕವಾಗಿ ಮಾಡು ತ್ತಿದ್ದಾರೋ ಎಂಬುದನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಹಕಾರಿ ರಿಜಿಸ್ಟ್ರೇಶನ್ ಇಲಾಖೆ ಸಚಿವರಿಗೆ ಮರ್ಚೆಂಟ್ಸ್ ಅಸೋಸಿಯೇಶನ್ ಮನವಿ ನೀಡಿದೆ.

RELATED NEWS

You cannot copy contents of this page