ಜನನೇಂದ್ರಿಯ ಕೊಯ್ದ ಸ್ಥಿತಿಯಲ್ಲಿ ವೃದ್ಧ ಆಸ್ಪತ್ರೆಗೆ ದಾಖಲು

ಇಡುಕ್ಕಿ:  ಜನನೇಂದ್ರಿಯ ತುಂಡಾದ ಸ್ಥಿತಿಯಲ್ಲಿ  ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಚ್ಚುಕರುಂದರುವಿ ನಿವಾಸಿಯಾದ ತಂಗಪ್ಪ (70)ನನ್ನು ಪೀರುಮೇಡ್ ತಾಲೂಕು ಆಸ್ಪತ್ರೆಗೆ ದಾಖಲಿಸ ಲಾಗಿದೆ. ನಾಯಿ ಕಚ್ಚಿ ಜನನೇಂದ್ರಿ ಯ ಗಾಯಗೊಂಡಿರುವುದಾಗಿ ತಿಳಿಸಿ ಸ್ಥಳೀಯರು ತಂಗಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಯುಧದಿಂದ ಕೊಯ್ದ ಗಾಯವಿದೆಯೆಂದು ಪ್ರಾಥಮಿಕ ತಪಾಸಣೆಯಿಂದ ಸ್ಪಷ್ಟವಾಗಿದೆ. ಗಾಯ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ತಂಗಪ್ಪನನ್ನು ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ತಂಗಪ್ಪನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರಿಂದ ಹೇಳಿಕೆ ದಾಖಲಿಸಲು ಸಾಧ್ಯವಿಲ್ಲವೆಂದು ವಾಗಮಣ್ ಪೊಲೀಸರು ತಿಳಿಸಿದ್ದಾರೆ.

You cannot copy contents of this page