ಜನಸಂಘದ ಹಿರಿಯ ನೇತಾರ ನಿಧನ
ಉಪ್ಪಳ: ಬಂದ್ಯೋಡು ಬಳಿಯ ಬೈದಿಲ ಪೊರಿಕ್ಕೋಡು ನಿವಾಸಿ ಬಿಜೆಪಿ, ಜನಸಂಘದ ಹಿರಿಯ ನೇತಾರ ಬಿ.ಎಂ ಗುರುವ [83] ನಿನ್ನೆ ಸ್ವ-ಗೃಹದಲ್ಲಿ ನಿಧನ ರಾದರು. ಇವರು ಮುಳ್ಳೇರಿಯ ಜಿ.ಎಚ್.ಎಸ್ ಶಾಲೆಯಲ್ಲಿ ಎಟೆಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ದ್ದಾರೆ. ಮೃತರು ಮಕ್ಕಳಾದ ಬಿ.ಎಂ ಶ್ರೀಧರ, ಪಾರ್ವತಿ, ಸೊಸೆ ದೇವಕಿ, ಅಳಿಯ ಕೊರಗಪ್ಪ, ಸಹೋದರ ರಾಘವ, ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ತುಕ್ರು ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರ ಮನೆಗೆ ಬಿಜೆಪಿ ನೇತಾರರು ಹಾಗೂ ಸಂಘ ಪರಿವಾರದ ನೇತಾರರು, ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.