ಜಪ್ತಿ ನಡೆಸಲು ಬಂದ ಬ್ಯಾಂಕ್ ನೌಕರರು ಮನೆಯೊಡತಿ ಬೆಂಕಿ ಹಚ್ಚಿ ಆತ್ಮಹತ್ಯೆ
ಪಾಲಕ್ಕಾಡ್: ಪಟ್ಟಾಂಬಿಯಲ್ಲಿ ಜಪ್ತಿಗೆ ಹೆದರಿ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ ಮೃತಪಟ್ಟರು. ಕಿಯಾಯೂರ್ ನಿವಾಸಿ ಜಯ ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಶೊರ್ನೂರಿನ ಸಹಕಾರಿ ಅರ್ಬನ್ ಬ್ಯಾಂಕ್‌ನಿಂದ ಜಪ್ತಿ ನಡೆಸಲು ಅಧಿಕಾರಿಗಳು ಜಯರ ಮನೆಗೆ ತಲುಪಿದ್ದರು. ಇದರ ಬೆನ್ನಲ್ಲೇ ಜಯ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 80 ಶೇ.ಕ್ಕೂ ಅಧಿಕ ಸುಟ್ಟು ಗಾಯಗೊಂಡ ಇವರನ್ನು ತೃಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
2015ರಲ್ಲಿ ಜಯ ಹಾಗೂ ಕುಟುಂಬ 2 ಲಕ್ಷ ರೂ.ಸಾಲ ಪಡೆದಿದ್ದರು. ಆದರೆ ಮರುಪಾವತಿ ಮೊಟಕುಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಜಪ್ತಿ ಕ್ರಮಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಜಯ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಮಧ್ಯೆ ಮೃತಪಟ್ಟರು.