ಜಪ್ತಿ ಮಾಡಿದ ಆರ್ಡಿಒರವರ ಜೀಪಿಗೆ ೬ ಲಕ್ಷ ರೂ. ಮೌಲ್ಯ
ಹೊಸದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಮಹಿಳೆಯ ದೃಷ್ಟಿ ನಷ್ಟಗೊಂಡ ಪ್ರಕರಣದಲ್ಲಿ ಜಪ್ತಿ ಮಾಡಿದ ಕಾಞಂಗಾಡ್ ಆರ್ಡಿ ಒರವರ ಜೀಪ್ಗೆ ಮೋಟಾರು ವಾಹನ ಇಲಾಖೆ ದರ ನಿಗದಿಪಡಿಸಿರುವುದು ಆರು ಲಕ್ಷ ರೂಪಾಯಿ. ನಷ್ಟ ಪರಿಹಾರ ಮೊತ್ತಕ್ಕಾಗಿ ಇದನ್ನು ಮಾರಾಟ ಮಾಡಲಿರುವ ಮುಂದಿನ ಕ್ರಮ ಕೈಗೊಳ್ಳಬೇಕೆಂಬ ಅರ್ಜಿ ಯನ್ನು ನಾಳೆ ಪರಿಗಣಿಸಲಾಗುವುದು.
ಚೆರುವತ್ತೂರು ಕಾಡಾಂ ಗೋಡ್ನ ಮಲ್ಲಕ್ಕರ ಕಮಲಾಕ್ಷಿಯವರ ಎಡಗಣ್ಣಿನ ದೃಷ್ಟಿ ನಷ್ಟಗೊಂಡ ಪ್ರಕರಣದಲ್ಲಿ ಹೊಸದುರ್ಗ ಸಬ್ ಕೋರ್ಟ್ ನ್ಯಾಯಾಧೀಶ ಎಂ.ಸಿ. ಬಿಜುರ ಜೀಪು ಜಪ್ತಿ ನಡೆಸಲಾಗಿದೆ. ಕಾಞಂಗಾಡ್ ಅಸಿಸ್ಟೆಂಟ್ ಮೋಟಾರು ವೆಹಿಕಲ್ ಇನ್ಸ್ಪೆಕ್ಟರ್ ವಿ. ವಿನೀತ್ ಜೀಪಿನ ಮೌಲ್ಯ ನಿರ್ಣಯಿಸಿ ವರದಿ ನೀಡಿದ್ದರು. ೨.೩೦ ಲಕ್ಷ ರೂ. ನಷ್ಟ ಪರಿಹಾರವಾಗಿ ನೀಡಲಿರುವ ಕೇಸಿನಲ್ಲಿ ಹೈಕೋರ್ಟ್ನಲ್ಲಿ ಅಫೀಲು ಸಲ್ಲಿಸಲು ಸರಕಾರ ಈಡಾಗಿ ನೀಡಿದ್ದು ಜೀಪು ಆಗಿತ್ತು.