ಉಪ್ಪಳ: ಜಮ್ಮು ಕಾಶ್ಮೀರದಲ್ಲಿ 10ಕ್ಕಿಂತಲೂ ಅಧಿಕ ಹಿಂದೂ ತೀರ್ಥಯಾತ್ರಿಗರ ಹತ್ಯೆಗೈದ ವಿರುದ್ದ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಿನ್ನೆ ಸಂಜೆ ನಡೆಯಿತು. ವಿಶ್ವಹಿಂದೂ ಪರಿಷತ್ ಮುಖಂಡ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಉದ್ಘಾಟಿಸಿದರು. ಹರಿಪ್ರಸಾದ್ ಪುತ್ರಕಳ ಅಧ್ಯಕ್ಷತೆ ವಹಿಸಿದರು. ಮಾಧವ ನಂಬೂದಿರಿ ಬೌಧ್ದಿಕ್ ನೀಡಿದರು. ಬಜರಂಗದಳ ಮುಖಂಡರಾದ ಪ್ರದೀಪ್ ಪೆರಿಯಾಲ್, ಹರೀಶ್ ನಾರಂಪಾಡಿ, ಅನಿಲ್ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು. ರಾಧಾಕೃಷ್ಣ ಭಟ್ ಪಳ್ಳತ್ತಡ್ಕ ಸ್ವಾಗತಿಸಿ, ಕೆ.ಸಿ ಚಂದ್ರನ್ ವಂದಿಸಿದರು. ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ವಠಾರದಿಂದ ಹೊರಟ ಮೆರವಣಿಗೆ ಪೇಟೆಯಲ್ಲಿ ಸಮಾಪ್ತಿಗೊಂಡಿತು.
