ಜಲಪಾತ ತೋರಿಸುವುದಾಗಿ ಕರೆದೊಯ್ದು ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ: ಆರೋಪಿ ಬಂಧನ

ಬದಿಯಡ್ಕ: ಜಲಪಾತ ತೋರಿಸುವುದಾಗಿ ತಿಳಿಸಿ ವಿದ್ಯಾರ್ಥಿಯನ್ನು ಕರೆದೊಯ್ದು ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬದಿಯಡ್ಕ ಪೊಲೀಸರು ಸೆರೆ ಹಿಡಿದಿದ್ದಾರೆ.

ಮಾವಿನಕಟ್ಟೆ ಬೀಜಂತ್ತಡ್ಕ ನೀರಪ್ಪಾಡಿಯ ಅಬ್ದುಲ್ ರಶೀದ್ (26) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಇತ್ತೀಚೆಗೆ ಶಾಲಾ ವಿದ್ಯಾರ್ಥಿ ಯಾದ 16ರ ಹರೆಯದ ಬಾಲಕನನ್ನು ಜಲಪಾತ ತೋರಿ ಸಿಕೊಡುವುದಾಗಿ ಕಾರಿನಲ್ಲಿ ಕರೆದೊಯ್ದು ಬಳಿಕ ಕಾಡಿನಲ್ಲಿ ಸಲಿಂಗರತಿ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಇದರಂತೆ ಆತನ ವಿರುದ್ಧ ಪೊಲೀಸರು ಪೋಕ್ಸೋ  ಪ್ರಕರಣ ದಾಖಲಿಸಿಕೊಂಡಿದ್ದರು. ಬಂಧಿತ ಆರೋಪಿಗೆ ನ್ಯಾಯಾ ಲಯ ರಿಮಾಂಡ್ ವಿಧಿಸಿದೆ.

RELATED NEWS

You cannot copy contents of this page