ಜಾಗತಿಕ ನಾಯಕರಲ್ಲಿ ಮೋದಿ ಪ್ರಥಮ: ಯೂ ಟ್ಯೂಬ್‌ನಲ್ಲಿ ೨ ಕೋಟಿ ಚಂದಾದಾರರು
ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೂಟ್ಯೂಬ್ ಚ್ಯಾನೆಲ್ ಖಾತೆಯಲ್ಲಿ ಚಂದಾದಾರರ ಸಂಖ್ಯೆ ಎರಡು ಕೋಟಿಗೂ ಮೀರಿದೆ. ವಿಶ್ವ ನಾಯಕರಲ್ಲಿ ಮೋದಿ ಈ ವಿಷಯದಲ್ಲೂ ಬಹುದೂರ ಮುಂದಿ ದ್ದಾರೆ. ಜಾಗತಿಕ ನಾಯಕನೆಂಬ ನೆಲೆಯಲ್ಲಿ ಉಳಿದ ನಾಯಕರಿಗೆ ಇವರ ಮೂರನೇ ಒಂದು ಬೆಂಬಲವೂ ಇಲ್ಲ. ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಮಂಗಳವಾರ ಸಂಜೆವರೆಗೆ ೪,೫೩೩,,೫೧೩,೪೪೮ ಪ್ರೇಕ್ಷಕರು ಇದ್ದಾರೆ. ಮೋದಿಯ ಬಳಿಕದ ಸ್ಥಾನದಲ್ಲಿರುವ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್‌ಬೋಲ್ಸೆನಾರೋಗೆ ೬೪ ಲಕ್ಷ ಚಂದಾದಾರರು ಮಾತ್ರವಿರುವುದು. ತೃತೀಯ ಸ್ಥಾನದಲ್ಲಿ ಉಕ್ರೇನ್ ಅಧ್ಯಕ್ಷ ವಾಲ್ಡೀಮಿರ್ ಸೆಲೆನ್‌ಸ್ಕಿ ಇದ್ದು ಇವರಿಗೆ ೧೧ ಲಕ್ಷ ಚಂದಾದಾರರಿದ್ದಾರೆ. ಯೂಎಸ್ ಅಧ್ಯಕ್ಷ ಜೋ ಬೈಡನ್‌ರಿಗೆ ೭.೯೪ ಲಕ್ಷ ಚಂದಾದಾರರಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೆನೇಡಿಯನ್ ಅಧ್ಯಕ್ಷ ಜಸ್ಟಿನ್ ಟ್ರುಡೋರಿಗೆ ೬೯,೦೦೦ ಚಂದಾ ದಾರರಿದ್ದಾರೆ. ಸಮೀಕ್ಷೆ ನಡೆಸಿದ ಮೋ ರ್ನಿಂಗ್ ಕನ್ಸಲ್ಟೆಂಟ್ ಮೋದಿಗೆ ಜಾಗತಿಕ ನಾಯಕರಲ್ಲಿ ಪ್ರಥಮ ಎಂಬ ಪದವಿ ನೀಡಿದೆ.