ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಶ್ವ ಆಟಿಸಂ ದಿನಾಚರಣೆ
ಕಾಸರಗೋಡು: ವಿಶ್ವ ಆಟಿಸಂ ದಿನದ ಅಂಗವಾಗಿ ಕಾಸರಗೋಡು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು (ಡಿ.ಎಲ್.ಎಸ್.ಎ) ಕಾಸರಗೋಡು ವಿಕಲಚೇತನರÀ ಕ್ಷೇಮಾಭಿವೃದ್ಧಿ ಸಹಕಾರಿ ಸಂಘದ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಉದ್ಘಾಟನೆ ನಿರ್ವಹಿಸಿದರು. ವಿಕಲಚೇತನರ ಕ್ಷೇಮ ಸಹಕಾರ ಸಂಘದ ಅಧ್ಯಕ್ಷ ಪಿ.ವಿಜಯನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂಡೋಸಲ್ಫಾನ್ ಸೆಲ್ ಡೆಪ್ಯುಟಿ ಕಲೆಕ್ಟರ್ ಜಿಜೋ ಲಾರೆನ್ಸ್ ಕೆ.ಎ.ಎಸ್, ಡಿ.ಎಲ್.ಎಸ್.ಎ ಸೆಕ್ಷನ್ ಆಫೀಸರ್ ಕೇಶವನ್ ಎ.ಪಿ, ಕಾಸರಗೋಡು ಪೀಪಲ್ಸ್ ಫೋರಂ ಅಧ್ಯಕ್ಷ ಪ್ರೊ.ವಿ. ಗೋಪಿನಾಥನ್ ಮೊದಲಾದವರು ಮಾತನಾಡಿದರು. ಡಾ.ಶ್ರೀಜಿತ್ ಕೃಷ್ಣನ್, ಜೆಬಿನ್ ಥಾಮಸ್ ಮತ್ತು ಫೆಬಾ ಆಲಿಸ್ ಥಾಮಸ್ ವಿವಿಧ ತರಗತಿ ಗಳನ್ನು ನಡೆಸಿದರು. ಡಿ.ಎಲ್.ಎಸ್.ಎ ಅಬ್ಬಾಸ್ ಸೈಫುದ್ದೀನ್ ವಂದಿಸಿದರು.