ಜಿಲ್ಲಾ ಬಂಟರ ಸಂಘದ ವತಿಯಿಂದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕೆ.ಕೆ. ಶೆಟ್ಟಿಯವರನ್ನು ಗೌರವಿಸಲು ತೀರ್ಮಾನ

ಕಾಸರಗೋಡು: ಜಿಲ್ಲಾ ಬಂಟರ ಸಂಘದ ಕಟ್ಟಡ ಸಮಿತಿಯ ಸಭೆ ಮಂಗಳೂರು ಹೋಟೆಲ್ ಸಭಾಂಗಣ ದಲ್ಲಿ ಜರಗಿತು. ನಾಯ್ಕಾಪುನಲ್ಲಿ ವ್ಯವಸ್ಥಿತ ಸಭಾಂಗಣ ನಿರ್ಮಿಸಲು ತೀರ್ಮಾನಿಸ ಲಾಯಿತು. ಸಾಂಸ್ಕೃತಿಕ, ಸಾಮಾಜಿಕ ರಂಗದ ಮುಂದಾಳು ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕೆ.ಕೆ. ಶೆಟ್ಟಿಯವರನ್ನು ಗೌರವಿಸಲು ತೀರ್ಮಾನಿಸಲಾಯಿತು. ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ ರಘುರಾಮ ಶೆಟ್ಟಿ ಕನ್ಯಾನ, ಹುಡ್ಕೋ ರವೀಂದ್ರ ಆಳ್ವ, ಉದ್ಯಮಿ ಕೆ.ಡಿ. ಶೆಟ್ಟಿ ದಡ್ಡಂಗಡಿ, ಸಂಜೀವ ಶೆಟ್ಟಿ ತಿಂಬರೆ, ಮೋನಪ್ಪ ಭಂಡಾರಿ, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಮಧುಕರ ರೈ ಕೊರೆಕಾನ ಅತಿಥಿಯಾಗಿದ್ದರು. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಕೋಶಾಧಿಕಾರಿ ಚಿದಾನಂದ ಆಳ್ವ ಮಂಜಕೊಟ್ಟಿಗೆ, ಸತೀಶ್ಚಂದ್ರ ಭಂಡಾರಿ, ಪಟ್ಲ ದಾಮೋದರ ಶೆಟ್ಟಿ, ಪದ್ಮನಾಭ ಶೆಟ್ಟಿ ವಳಮಲೆ, ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು, ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರು, ಕಿರಣ್ ಮಾಡ, ವಿವಿಧ ಪಂಚಾಯತ್ ಘಟಕದ ಅಧ್ಯಕ್ಷರು ಭಾಗವಹಿಸಿದರು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಐ. ಸುಬ್ಬಯ್ಯ ರೈ ಸ್ವಾಗತಿಸಿ, ನಾರಾಯಣ ಹೆಗಡೆ ಕೋಳಿ ಬೈಲು ಪ್ರಸ್ತಾಪಿಸಿದರು. ಕಾರ್ಯದರ್ಶಿ ಮೋಹನ್ ರೈ ವಂದಿಸಿದರು.

RELATED NEWS

You cannot copy contents of this page